ಬೇಸಿಗೆಯ ಬೆಸ್ಟ್ food – summerfood
ಬೇಸಿಗೆ ಕಾಲದಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಿಕೊಂಡು, ದೇಹವನ್ನು ತಂಪಾಗಿಡಲು ಸೇವಿಸಲೇ ಬೇಕಾದ ಆಹಾರಗಳು
1)ಎಳನೀರು- ನೈಸರ್ಗಿಕ ಪಾನಿಯ, ಕಲ್ಪವೃಕ್ಷ ಬೇಸಿಗೆಗೆ ಒಂದು ರೀತಿಯ ವರವೇ ಎನ್ನಬಹುದು, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ನಿರ್ಜಲಿಜರಣ ಸಮಸ್ಯೆಗೆ ಒಂದು ರೀತಿಯ ರಾಮಬಾನವೇ ಸರಿ, ಜೀರ್ಣಕ್ರಿಯೆ ವೃದ್ಧಿಗೆ, ಚರ್ಮ ಸುಟ್ಟುಗಟ್ಟುವಿಕೆಗೆ ತಡಿಯಲು,ಮಲಬದ್ದತೆ ಸಮಸ್ಯೆಗೆ,ಬಲವಾದ ಮೂಳೆಗಳಿಗೆ,ಕಿಡ್ನಿ ಕಲ್ಲು ಸಮಸ್ಯೆ,ಮೂತ್ರದ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ, ರಕ್ತದೋತ್ತಡ ತಡೆಯಲು, ಶಕ್ತಿಯನ್ನು ವರ್ದಿಸುತ್ತದೆ.
ದಿನಕ್ಕೊಮ್ಮೆ ಎಳನೀರು ಕುಡಿದರೆ ತುಂಬಾ ಒಳ್ಳೆಯದು
ನಿಂಬೆ ಹಣ್ಣು –
ತಾಜತನಕ್ಕೆ ಇನ್ನೊಂದು ಹೆಸರೇ ನಿಂಬೆ ಹಣ್ಣಿನ ಜ್ಯೂಸ್ ಸೇವನೆ ದೇಹಕ್ಕೆ ಸಾಕಷ್ಟು ತಂಪು, ವಿಟಮಿನ್ ಸಿ ಅಂಶ ಇದರಲ್ಲಿ ಹೆಚ್ಚಾಗಿ ಕಂಡುಬರುವುದರಿಂದ, ದೇಹದ ಜೀರ್ಣಶಕ್ತಿ ಹೆಚ್ಚು ಮಾಡುವುದರಲ್ಲಿ ಸಂಶಯವಿಲ್ಲ,ಲಿವರ್ ನಲ್ಲಿ ಉತ್ಪಾದನೆ ಆಗುವ ಜೀರ್ಣ ರಸ ಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ,ಹೊಟ್ಟೆ ಉಬ್ಬರ, ಎದೆ ಉರಿ,ಭೇದಿ ಮುಂತಾದ ಸನಸ್ಯೆಗಳಿಗೆ ಇದು ಉಪಕಾರಿಯಾಗಿದೆ.
ಟೊಮೇಟೊ -ಟೊಮ್ಯಾಟೋ ವಿಟಮಿನ್ ಸಿ,ವಿಟಮಿನ್ ಅ, ಫೈಬರ್, ಫೋಲೇಟ್, ಕ್ಯಾಲ್ಸಿಯಂ ಇನ್ನು ಅಧಿಕ ಅಗತ್ಯ ಗುಣಗಳಿಂದ ಸಮೃದ್ಧಿಯಾಗಿದ್ದು, ಮುಖದ ಕಾಂತಿಯನ್ನು ಸಹ ವೃದ್ಧಿಸುತ್ತದೆ
ಮಜ್ಜಿಗೆ. ಬೇಸಿಗೆಯಲ್ಲಿ
ನೀರು ಮಜ್ಜಿಗೆಯಷ್ಟು ದೇಹವನ್ನು ತಂಪಾಗಿರಿಸಲು, ದೇಹದ ದಾಹವನ್ನು ತಂಸಲು ಬೇರೆ ಯಾವುದೇ ಪಾನೀಯಕ್ಕೂ ಸಾಧ್ಯವೇ ಇಲ್ಲ,ಕಫ ಮತ್ತು ವಾತದ ಸಮಸ್ಯೆಗೆ,ಉರಿಯೂತದ ಚಿಕಿತ್ಸೆಗೆ ಮಜ್ಜಿಗೆಯೆ ಸಹಾಯಕಾರಿ,ಇನ್ನು ಹೊಟ್ಟೆ ಹಸಿವಿನ ಸಮಸ್ಯೆ,ಇದರಲ್ಲಿರುವ probiotic ಅಂಶ ಹೊಟ್ಟೆಯ ಸೊಂಕನ್ನು ತಡೆಯುತ್ತದೆ ಅನಿಮಿಯ, ಜೀರ್ಣಕ್ರಿಯೆ, gastrointestinal ನ ಯಾವುದೇ ಸಮಸ್ಯೆಗೆ ಮಜ್ಜಿಗೆಯೆ ಮದ್ದು.
ಸೌತೆಕಾಯಿ –
ಸೌತೆಕಾಯಿಯು 95% ರಷ್ಟು ನೀರಿನಿಂದ ಕೂಡಿದ್ದು ಬೇಸಿಗೆಯ best food,ಇದು ದೇಹದಲ್ಲಿನ ವಿಷಕಾರಿ ಪದಾರ್ಥ ಗಳನ್ನ ಹೊರ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ,ದೇಹವನ್ನು ಒಳಗಿನಿಂದ ಶುದ್ದಿಕರಿಸುತ್ತದೆ,
ಇದರಲ್ಲಿನ ನಾರಿನಾ0ಶ,ಪೊಟಾಸಿಯುಂ ಮತ್ತು ಮೆಗ್ನಿಸಿಯಂ ರಕ್ತದ ಒತ್ತಡ ಹಾಗೂ ಮಲಬದ್ದತೆ ತಡಿಯುತ್ತದೆ,ದೇಹದ ಅರೋಗ್ಯದ ಜೊತೆಗೆ ಚರ್ಮದ ರಕ್ಷಣೆಯನ್ನು ಮಾಡುತ್ತದೆ.
ಕಲ್ಲಂಗಡಿ
ಬೇಸಿಗೆಯಲ್ಲಿ ಕಲ್ಲಂಗಡಿ ನಾಲಿಗೆಗೆ ರುಚಿ, ದೇಹಕ್ಕೆ ತಂಪು,ಇದರಲ್ಲಿರುವ ಕ್ಯಾಲೋರಿ ಬಹಳ ಕಡಿಮೆ, ಅತೀ ಕಡಿಮೆ ಪ್ರಮಾಣದ ಸೋಡಿಯಂ ಇರುವುದರಿಂದ ಯಾರು ಬೇಕಾದರೂ ತಿನ್ನಬಹುದಾದ ಹಣ್ಣು,ವಿಟಮಿನ್ A, C, B6,pottasium, antioxidant, ಲೈಕೋಪಿನ್ ಮುಂತಾದ ಉಪಯುಕ್ತ ವಸ್ತುಗಳು, ಹೃದಯ ಮತ್ತು ಕಣ್ಣಿನ ಹಾಗೂ ಚರ್ಮದ ಆರೋಗ್ಯಕ್ಕೆ ಬಹಳ ಉಪಾಯಕಾರಿ.
ಇನ್ನು ಹೀರೆಕಾಯಿ, ಹೆಸರುಬೇಳೆ, ತಾಜ ಹಣ್ಣುಗಳು, ಹಸಿರು ತರಕಾರಿಗಳನ್ನು ಹೆಚ್ಚು ಪ್ರಮಾಣದ್ಲಲಿ ಸೇವನೆ ಮಾಡಿ,, ಆದಷ್ಟು ಬೇಸಿಗೆಯಲ್ಲಿ ಸಸ್ಯಾಹಾರವನ್ನೇ ಸೇವಿಸಿದರೆ ಒಳ್ಳೆಯದು. ಕೊನೆಯದಾಗಿ ಹಾಗೂ ಮುಖ್ಯವಾಗಿ ನೀರನ್ನು ಹೆಚ್ಚಾಗಿ ಕುಡಿದು ದೇಹದಲ್ಲಾಗುವ dehydration ಸಮಸ್ಯೆಯಿಂದ ದೂರವಿರಿ. ಹಾಗೂ
enjoy the summer.
ಡಾ. ಮಾನಸ ಆನಂದ್ ಎಲ್