ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ಸೀಸನ್ ನ ಎರಡನೇ ಅತಿಥಿಯಾಗಿ ಆಗಮಿಸಿದ ಪ್ರಭುದೇವ ತಮ್ಮ ಜೀವನದ ಅನೇಕ ವಿಷಯಗಳನ್ನು ಮೆಲುಕು ಹಾಕಿದರು. ತಮ್ಮ ಬಾಲ್ಯ ಯೌವ್ವನ ಜೀವನದ ಅನೇಕ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಭುದೇವ ಅವರ ಬಗ್ಗೆ ಹಲವು ಸೆಲೆಬ್ರಿಟಿಗಳು ವಿಡಿಯೋ ಮೂಲಕ ಮಾತನಾಡಿ ಶುಭ ಕೋರಿದರು. ನಟ ಪ್ರಕಾಶ್ ರೈ ಸಹ ತಮ್ಮ ಹಾಗೂ ಪ್ರಭುದೇವ ಅವರ ಗೆಳೆತನದ ಬಗ್ಗೆ ಮಾತನಾಡುತ್ತಾ, ಅವರ ಪುತ್ರ ತೀರಿಕೊಂಡ ಸಂದರ್ಭದಲ್ಲಿ ನಾನು ಅವರೊಟ್ಟಿಗೆ ಇದ್ದೆ ಎಂದು ನೆನಪು ಮಾಡಿಕೊಂಡರು. ಆಗ ವೇದಿಕೆ ಮೇಲೆ ಪ್ರಭುದೇವ ಅವರ ಮಗನ ಚಿತ್ರವನ್ನು ಪ್ರದರ್ಶಿಸಲಾಯಿತು.
ಅದನ್ನು ನೋಡಿದ ಪ್ರಭುದೇವ ಕೆಲ ಕಾಲ ಭಾವುಕರಾದರು. ನಿರೂಪಕ ರಮೇಶ್ ಅವರು, ಹೇಳಿ ಪ್ರಭುದೇವ ಅವರೇ ಏನಾಯಿತು ಮಗನಿಗೆ ಎಂದಾಗ ಪ್ರಭುದೇವ ಅವರಿಗೆ ಮಾತೇ ಹೊರಡಲಿಲ್ಲ. ಸನ್ನೆ ಮೂಲಕ ಇದನ್ನು ಸ್ಕಿಪ್ ಮಾಡಿ ಬೇರೆ ವಿಷಯ ಮಾತನಾಡೋಣ ಎಂದರು. ರಮೇಶ್ ಕೂಡ ಮಗನ ವಿಷಯ ಕೆದಕದೆ ಬೇರೆ ವಿಷಯ ಕಡೆ ಪ್ರಭುದೇವ ಜೊತೆ ಮಾತಿಗಿಳಿದರು.
ಪ್ರಭುದೇವ ಮಗನಿಗೆ ನಿಜಕ್ಕೂ ಏನಾಗಿತ್ತು ಯಾಕೆ ಅವರು ಮಕ್ಕಳಿಂದ ದೂರದರು ಎಂಬ ವಿಚಾರಕ್ಕೆ ಉತ್ತರ ಸಿಗಲಿಲ್ಲ, ಅದೇನೇ ಇರಲಿ ಸೆಲೆಬ್ರೆಟಿ ಎಂದಾಕ್ಷಣ ನಾವು ಏನೇನೋ ಮಾತನಾಡುತ್ತೇವೆ. ಅವರಿಗೂ ನಮ್ಮಂತೆಯೇ ಒಂದು ಬದುಕು ಇರುತ್ತದೆ ಅವರಿಗೂ ವಯಕ್ತಿಕ ಜೀವನದಲ್ಲಿ ನೋವುಗಳಿರುತ್ತದೆ ಎಂಬುದು ಸಭಿತಾಗಿದ್ದು ಕನ್ನಡದ ಹಿರಿಮೆಯನ್ನು ಪ್ರಭುದೇವ ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಎಂಬುದು ಕನ್ನಡಿಗರ ಆಶಯ