ಮೈಸೂರು : ಭಾರತೀಯರಲ್ಲಿ ಬದಲಾದ ಜೀವನ ಶೈಲಿಯಿಂದಾಗಿ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ ಸಿ ಎನ್ ಮಂಜುನಾಥ್ ಮೈಸೂರಿನಲ್ಲಿ ಹೇಳಿದರು.
ಯುವಕರಲ್ಲಿ, ಮಧ್ಯ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ.35% ಹೃದಯಾಘಾತ 45 ವರ್ಷಕ್ಕಿಂತ ಕೆಳಗಿವನರಿಗೆ ಆಗುತ್ತಿದೆಕಳೆದ 6 ವರ್ಷದಲ್ಲಿ ಐದೂವರೆ ಸಾವಿರ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ.
ಇದೀಗ ಭಾರತ ದೇಶದ ಯುವಕ ಹಾಗು ಮಧ್ಯ ವಯಸ್ಕರ ಹೃದಯ ಅಷ್ಟೊಂದು ಆರೋಗ್ಯಕರವಾಗಿಲ್ಲ
ಇದಕ್ಕೆ ಹಲವಾರು ಕಾರಣಗಳಿವೆ ಎಂದರು.
ಯಾರಾದರೂ ಪ್ರತಿಷ್ಠಿತ ಕುಟುಂಬದ ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದರೆ ಮಾತ್ರ ಸುದ್ದಿಯಾಗುತ್ತದೆ.ಕಳೆದ 15 ವರ್ಷಗಳಿಂದ ನೋಡಿದರೆ ಯುವಕರಲ್ಲಿ 22% ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ
ಹೀಗಾಗಿ ಹಲವಾರು ರೀತಿಯ ಮುನ್ನೆಚ್ಚರಿಕೆ ವಹಿಸಬೇಕಿದೆ.
ಧೂಮಪಾನ, ಮದ್ಯಪಾನ ಮಾಡಬಾರದು.
ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಬಿ ಪಿ, ಶುಗರ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಫಾಸ್ಟ್ ಫುಡ್, ಜಂಕ್ ಫುಸ್ಟ್ ಸೇವನೆ ಮಾಡಬಾರದು ಎಂದು ತಿಳಿಸಿದರು.
ಭಾರತದಲ್ಲಿ ಹೃದಯಾಘಾತ ನಂಬರ್ ಒನ್ ಕಿಲ್ಲರ್ ಆಗಿದೆ
ಇದರಿಂದ ಜನರಿಗೆ ಗಾಬರಿ, ಆತಂಕವಿದೆ.ಕಳೆದ 20 ವರ್ಷಗಳಿಂದ ಇದೇ ರೀತಿ ಆಗುತ್ತಿದೆ.ಜಪಾನ್,ಅಮೇರಿಕಾ, ಐರೋಪ್ಯ ರಾಷ್ಟ್ರಗಳಲ್ಲಿ ಹೃದಯಾಘಾತ ಪ್ರಮಾಣ ಕಡಿಮೆ ಆಗುತ್ತಿದೆ.ಭಾರತದಲ್ಲಿ ಮಾತ್ರ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆಇದಕ್ಕೆ ಬದಲಾದ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ.
ಆಹಾರ ಪದ್ದತಿಗಳು, ಆಧುನಿಕ ಜೀವನದ ಒತ್ತಡಗಳು ಹೃದಯಾಘಾತಕ್ಕೆ ಕಾರಣವಾಗಿವೆ.ವಾಯು ಮಾಲಿನ್ಯ, ಅನುವಂಶೀಯತೆ ಕಾರಣದಿಂದಲೂ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆ.ಹೃದಯಾಘಾತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
35 ವರ್ಷ ದಾಟಿದ ಪುರುಷರು, 40 ವರ್ಷ ದಾಟಿದ ಮಹಿಳೆಯರು ಪ್ರತಿವರ್ಷ ತಪಾಸಣೆಮಾಡಿಸಿಕೊಳ್ಳಬೇಕು.
ಕೊರೊನಾ ನಂತರವೂ ಹೃದಯಾಘಾತ ಪ್ರಮಾಣ 5% ಹೆಚ್ಚಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ ಸಿ ಎನ್ ಮಂಜುನಾಥ್ ತಿಳಿಸಿದರು