ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿಯಲ್ಲಿ ಭರ್ಜರಿ ಮಳೆಯಾಗಿರುವ ಹಿನ್ನಲೆಯಲ್ಲಿ ಅಮಚವಾಡಿ – ವೆಂಕಟಯ್ಯನಛತ್ರ ನಡುವಿನ ರಸ್ತೆಯಲ್ಲಿ ಮಳೆಯ ನೀರು ಅಧಿಕವಾಗಿ ಹರಿಯುತ್ತಿರುವ ಹಿನ್ನಲೆಯಲ್ಲಿ ಈ ಮಾರ್ಗ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರ, ಅಮಚವಾಡಿ ಸುತ್ತಮುತ್ತಲು ಭಾರಿ ಮಳೆಯಾಗಿರುವ ಹಿನ್ನಲೆಯಲ್ಲಿ ಅಮಚವಾಡಿ ವೆಂಟಕಯ್ಯನಛತ್ರ ನಡುವಿನ ಹೆಬ್ಬಳ್ಳ ಸೇತುವೆ ಮುಳುಗಡೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಮಳೆಯ ನೀರು ಕಾಲುವೆಯ ಮೂಲಕ ಹರಿದು ಹೋಗುತ್ತಿದೆ.
ಮಳೆಯಿಂದ ಕಂಗಲಾಗಿದ್ದ ಜನತೆಗೆ ಮಳೆಯಾಗಿದ್ದರಿಂದ ನೆಮ್ಮದಿಯಾಗಿದ್ದು, ಮಳೆಯ ನೀರು ಹರಿಯುವುದನ್ನು ಕಂಡು ಪುಳಕಿತರಾಗಿದ್ದಾರೆ.