ಟಿ ನರಸೀಪುರ : ಬರ ಪರಿಹಾರ ಹಣ ಸಾಲಕ್ಕೆ ಜಮಾ ಮಾಡಿದ ಮಾದಾಪುರ ಕೆನರಾ ಬ್ಯಾಂಕ್ ಶಾಖೆಗೆ ರೈತರ ಮುತ್ತಿಗೆ. ರೈತರ ಖಾತೆಗೆ ವಾಪಸ್ ಹಣ ಜಮಾ ಮಾಡಲು ಕೆನರಾ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಉಮೇಶ್ ಒಪ್ಪಿಗೆ
ರಾಜ್ಯ ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಭಿಕ್ಷೆಯಲ್ಲ ಬೆರಳೆಣಿಕೆಯಷ್ಟು ರೈತರಿಗೆ 500- 1000ರೂ ಪರಿಹಾರ ನೀಡಿ ರೈತರನ್ನ ವಂಚಿಸುತ್ತಿರುವ ಸರ್ಕಾರದ ಇಬ್ಬಗೆಯ ನೀತಿಯನ್ನ ಧಿಕ್ಕರಿಸುತ್ತೇವೆ. ಬೇಕೇ ಬೇಕು ನ್ಯಾಯ ಬೇಕು ನ್ಯಾಯಯುತ ಬರ ಪರಿಹಾರ ನೀಡಲೇಬೇಕು. ಎಂದು ಘೋಷಣೆ ಕೂಗುತ್ತಾ ನೂರಾರು ರೈತರು ಇಂದು ಟಿ ನರಸಿಪುರ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸಿಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತಾರ್ ಮಂಜುಳ ಅವರಿಗೆ ಒತ್ತಾಯ ಪತ್ರ ಸಲ್ಲಿಸಲಾಯಿತು
ಮಳೆ ಹಾನಿ ಬಾಳೆ ಬೆಳೆ ನಷ್ಟ
ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು ಎಲ್ಲಾ ಬೆಳೆ ನಷ್ಟಕ್ಕೂ ಎಲ್ಲಾ ರೈತರಿಗೂ ಬರ ಪರಿಹಾರ ನೀಡಬೇಕು. ಎಂದು ಒತ್ತಾಯಿಸಲಾಯಿತು
ಸರ್ಕಾರ ನಾಟಕೀಯವಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಎಕರೆಗೆ ಕನಿಷ್ಠ 25,000 ನೀಡಲೇಬೇಕು
ತಾಲೂಕಿನ ಎಲ್ಲಾ ಕೆರೆಗಳ ನಾಲೆಗಳ ಹುಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ ಭೂಮಿ ಫಲವತ್ತತೆಗೆ ಒತ್ತು ನೀಡಲು ಕಾರ್ಯ ಯೋಜನೆ ಜಾರಿ ಮಾಡಬೇಕು.
ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಯಾರು ಬೆಳೆ ಬೆಳೆಯಬಾರದು ಎಂದು ಅಧಿಸೂಚನೆ ಹೊರಡಿಸಿದ ಸರ್ಕಾರ ಈ ಭಾಗದ ಎಲ್ಲಾ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಇದೇ ಸರ್ಕಾರ ಬರಗಾಲದ ಬೆಳೆ ನಷ್ಟ ಅಂದಾಜು ಸಮೀಕ್ಷೆ ಮಾಡಿ ವರದಿ ಕಳಿಸಿ ಎಂದು ಸೂಚಿಸಿದೆ ಈ ಕಾರಣ ಕಾವೇರಿ ಅಚ್ಚುಕಟ್ಟು ಭಾಗದ ಬಹುತೇಕ ರೈತರಿಗೆ ಬೆಳೆ ಬೆಳೆದಿಲ್ಲ ಎಂಬ ಕಾರಣಕ್ಕಾಗಿ ಬರ ಪರಿಹಾರ ನಷ್ಟ ಸಿಕ್ಕಿಲ್ಲ ಇದು ಸರ್ಕಾರದ ಇಬ್ಬಗೆ ನೀತಿಯಾಗಿದೆ. ಎಂದು ಖಂಡಿಸಿದರು
ಜಿಲ್ಲೆಯಾದ್ಯಂತ ಮಳೆ ಹಾಗೂ ಬಿರುಗಾಳಿ ಹಾನಿಯಿಂದ ರೈತರ ಬಾಳೆ ಬೆಳೆ .ತರಕಾರಿ. ಬೆಳೆ ನಷ್ಟ ಪರಿಹಾರ. ವಿಪ್ಪತು ನಿರ್ವಹಣಾ ಪ್ರಾಧಿಕಾರದಿಂದ ಕೂಡಲೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಯಿತು
ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ್. ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ ತಾಲೂಕ ಅಧ್ಯಕ್ಷ ಕುರುಬೂರು ಸಿದ್ದೇಶ್. ಜಂಟಿ ಕಾರ್ಯದರ್ಶಿ ಪರಶಿವಮೂರ್ತಿ. ಪ್ರಸಾದ್ ನಾಯಕ್. ಪ್ರದೀಪ್. ಅಪ್ಪಣ್ಣ ರಾಜೇಶ್. ಉಮೇಶ್. ನಿಂಗರಾಜು ರೂಪ ಮುಡುಕನಪುರ. ಕುಮಾರ್ ಬನ್ನೂರ್ ಸೂರಿ ಇನ್ನು ಮುಂತಾದವರು ಇದ್ದರು