ಹೊಸೂರು- ಸಂಘಟನೆ ಮಂಜುನಾಥ್ –
ಶ್ರೀರಾಮನ ನೆಲವೀಡಿನಲ್ಲಿ, ತ್ರಿವಳಿ ಜಿಲ್ಲೆಯ ಜೀವನಾಡಿ ಕಾವೇರಿ ನದಿ ಧನುಷ್ಕೋಟಿಯ ಜಲಪಾತದಲ್ಲಿ ಭೋರ್ಗರೆತದ ನಿನಾದದೊಂದಿಗೆ ಧುಮ್ಮಿಕ್ಕಿ ಹರಿಯುತ್ತಿರುವ ರೌದ್ರ ರಮ್ಯ ರಮಣಿಯ ನೀರಿನ ಅಗಮ್ಯ ಸೌಂದoರ್ಯ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.
ಹೌದು ಪ್ರಕೃತಿ ನಾಡು ಮಲೆನಾಡಿನ ಮಡಿಕೇರಿಯಲ್ಲಿ ಮುಂಗಾರಿನ ಮಳೆ ಸ್ಪರ್ಶಿಸುತ್ತಿದ್ದಂತೆ ಕಾವೇರಿ ಕಣಿವೆಯಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಯಾತ್ರೆ ಸ್ಥಳ ಹಾಗೂ ಪ್ರವಾಸಿ ತಾಣವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿನ ಧನುಷ್ಕೋಟಿ ಜಲಪಾತಕ್ಕೆ ಜೀವ ನದಿ ಕಾವೇರಿ ನೀರಿನಿಂದ ಜೀವ ಕಳೆ ಬಂದಿದ್ದು. ಪ್ರಕೃತಿ ನೈಜ್ಯ ಸೌಂದರ್ಯದ ನಡುವೆ ಮೈದುಂಬಿ ಹರಿಯುತ್ತಿರುವ ಕಾವೇರಿ ಜಲಪಾತದಲ್ಲೀಗ ಕೆಂಬಣ್ಣದ ಹಾಲ್ನೊರೆಯ ಚಿತ್ತಾರದ ರೌದ್ರ ನರ್ತನದೊಂದಿಗೆ ದುಮ್ಮಿಕ್ಕಿ ಹರಿಯಲಾರಂಭಿಸಿದ್ದು ಪ್ರವಾಸಿ ಚಾರಣ ಪ್ರಿಯರಿಗೆ ತನ್ನ ಸೌಂದರ್ಯವನ್ನು ಸೂಜಿಗಲ್ಲಿನಂತೆ ಸೂಸುತ್ತಿದ್ದು ವ್ಹಾವ್ ಎಂಥ ಸೊಬಗು ….! ಎಂಬ ಉದ್ಘಾರ ಹೊರಡಿಸ ಬಹುದಾದ ಸ್ಥಳವಾಗಿದ್ದು ನಿತ್ಯ ಸಾವಿರಾರು ಮಂದಿ ಈ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಜಲಪಾತ ವೈಭವ :- ರಾಜ್ಯದ ಪ್ರಮುಖ 11 ಜಲಪಾತಗಳೊಲ್ಲೊಂದಾಗಿರುವ ಈ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಜಿಲ್ಲೆಗೆ ಮೆರಗು ಹಾಗೂ ಏಕೈಕ ಜಲಪಾತವಾಗಿರುವುದು ಹೆಗ್ಗಳಿಕೆಯಾಗಿದ್ದು. ಬಂಡೆಗಳ ಕೊರೆದು ಕಲಾಕೃತಿ ನಿರ್ಮಿಸಿಕೊಂಡು ಸುಮಾರು 27 ಮೀಟರ್ ಎತ್ತರದ ಬಂಡೆಗಳ ಮೇಲಿಂದ ಮೈದುಂಬಿ ಧುಮ್ಮಿಕ್ಕಿ ಭೋರ್ಗರೆಯುತ್ತ ಕೆಂಬಣ್ಣದ ಹಾಲ್ನೊರೆಯಂತೆ ಹರಿಯುವ ಕಾವೇರಿ ನದಿಯ ನಯನ ಮನಮೋಹಕ ಜಲಧಾರೆ ತನ್ನೆಡೆಗೆ ಪ್ರವಾಸಿಗರ ತನುಮನಸೆಳೆಯುತ್ತಿದೆ. ಕಾವೇರಿಯ ಈ ರೌದ್ರ ರಮ್ಯ ರಮಣಿಯ ದೃಶ್ಯ ಎಂತವರನ್ನು ಕೂಡ ಮಂತ್ರಮುಗ್ದರನ್ನಾಗಿಸುತ್ತದೆ.
ಜಲಪಾತ :- ನೈಜ್ಯ ಪ್ರಕೃತಿಯಿಂದ ಕೂಡಿರುವ ಸೌಂದರ್ಯಕ್ಕೆ ಅಭಿವೃದ್ಧಿಯ ಲೇಪನ ಪ್ರವಾಸಿ ತಾಣಕ್ಕೆ ಮತ್ತಷ್ಟು ಮೆರಗು ತಂದಿರುವುದು ಪ್ರವಾಸಿಗರಿಗೆ ಬೂಸ್ಟ್ ಸಿಕ್ಕದಂತಾಗಿದೆ. ಮಳೆಗಾಲದಲ್ಲಿ ಜಲಪಾತ ಸತತ ಮೂರು ತಿಂಗಳಿಗೂ ಹೆಚ್ಚು ಕಾಲ ಮೈದುಂಬಿ ಹರಿಯುತ್ತದೆ. ಕಾವೇರಿ ನದಿಯ ನಯನ ಮನಮೋಹಕ ಜಲಪಾತವನ್ನು ನೋಡುವ ಪ್ರವಾಸಿಗರಿಗಂತೂ ಈ ಜಲಧಾರೆಯ ದೃಶ್ಯ ರಸದೌತಣವಾಗಿದೆ ದಿನನಿತ್ಯ ಹಾಗೂ ರಜಾದಿನಗಳಲ್ಲಿ ರಾಜ್ಯದ ನಾನಾ ಬಾಗಗಳಿಂದ ನೋಡಲು ಕಿಕ್ಕಿರಿದು ಬರುವ ಸಹಸ್ರಾರು ಮಂದಿ ಪ್ರವಾಸಿಗರ ಕಣ್ಣುಗಳಲ್ಲೇ ಜಲಪಾತದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತ ತನುಮನ ತಣಿಸಿಕೊಳ್ಳುತ್ತಾರೆ. ಜತೆಗೆ ರೌದ್ರ ರಮ್ಯ ರಮಣಿಯ ಜಲಪಾತದ ದೃಶ್ಯವನ್ನು ಮೊಬೈಲ್ ಕ್ಯಾಮರಗಳಲ್ಲಿ ಫೋಟೊ ಕ್ಲಿಕ್ ಮಾಡುತ್ತಿದ್ದಾರೆ ಇನ್ನೊಂದೆಡೆ ಕುಟುಂಬದ ಸದಸ್ಯರು ಸ್ನೇಹಿತರು ನವವಿವಾಹಿತಯರು ಹಾಗೂ ಯುವಕ ಯುವತಿರು ಜಲಪಾತದೊಂದಿಗೆ ಸೆಲ್ಫಿ ಫೋಟೋ ತಗೆದು ಕೊಂಡು ಪುಳಕಗೊಳ್ಳುತ್ತ ಸಂತಸ ವ್ಯಕ್ತಪಡಿಸುವರು.
ಕೋಟ್:- ಮುಂಗಾರಿನ ಮಳೆಯಿಂದಾಗಿ ಚುಂಚನಕಟ್ಟೆ ಧನುಷ್ಕೋಟಿ ಕಾವೇರಿ ಜಲಪಾತದಲ್ಲಿ ಮೈದುಂಬಿ ಹರಿಯುತ್ತಿದೆ. ಬೆಳ್ಳಿ ವರ್ಣದ ನೀರಿನ ಮೋಹಕತೆಯನ್ನು ಕುಟುಂಬ ಸಮೇತ ಕಣ್ತುಂಬಿಕೊಳ್ಳುವುದೇ ಚೆಂದ. ಆದರೆ ಆವರಣದಲ್ಲಿ ಯಾವುದೇ ಭದ್ರತೆ ಇಲ್ಲ ಕೆಲ ಪುಂಡರ ಹಾಗೂ ಕುಡುಕರ ಕಿರಿಕಿರಿ ಹೆಚ್ಚಿದ್ದು ಭಯದಲ್ಲಿ ಈ ಜಲಪಾತದ ಸೌಂದರ್ಯ ಸವಿಯ ಬೇಕಿದೆ. ಹಾಗಾಗಿ ಭದ್ರತೆ ವ್ಯವಸ್ಥೆ ಕಲ್ಪಿಸಿ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಬೇಕಿದೆ.