ಮೈಸೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ.
ಕಿಡ್ನಾಪ್ ಪ್ರಕರಣದ ಎಫ್ ಐ ಆರ್ ದಾಖಲಾಗುವ ಮುನ್ನವೆ ಸತೀಶ್ ಬಾಬು ವಶಕ್ಕೆ ಪಡೆದಿದ್ದಾರೆ.
ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಸಾ.ರಾ.ಮಹೇಶ್.
ಎಫ್ ಐ ಆರ್ ಆಗುತ್ತೆ ಎಂದು ಇವರಿಗೆ ಕನಸು ಬಿದ್ದಿತ್ತ.
ರಾತ್ರಿ 9.5 ರಲ್ಲಿ ಎಫ್ ಐ ಆರ್ ಆಗಿದೆ.
ಆದ್ರೆ ಮಧ್ಯಾಹ್ನ 12 ಗಂಟೆಗೆ ಸತೀಶ್ ಬಾಬು ರನ್ನ ಕರೆದುಕೊಂಡು ಹೋಗಿದ್ದಾರೆ.ಬೇಕರಿಯೊಂದರ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ.
ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲಿಟ್ ಮಾಡಿ ಕೊಟ್ಟಿದ್ದಾರೆ.
ಆದ್ರೆ ಮತ್ತೊಬ್ಬ ಮೊಬೈಲ್ ವೀಡಿಯೋ ಮಾಡಿ ಅದನ್ನ ಬೇರೊಬ್ಬರಿಗೆ ಕಳುಹಿಸಿದ್ದಾನೆ. ಇದೆಲ್ಲ ಸಾಕ್ಷಿಗಳು ನಮ್ಮ ಬಳಿ ಇದೆ.ಇದನ್ನು ಇಂದು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದರು.
ಇದಕ್ಕಾಗಿ ಮೈಸೂರಿನಿಂದ ಸಬ್ ಇನ್ಸ್ಪೆಕ್ಟರ್ ಆಲ್ಟೊ ಕಾರ್ ನಲ್ಲಿ ಹೋಗಿದ್ದರು. ಇದೆಲ್ಲ ದಾಖಲೆಗಳು ನಮ್ಮ ಬಳಿ ಇದೆ.
ದೂರು ಕೊಟ್ಟ ಹುಡುಗ ಅಮಾಯಕ. ಆತನ ಬಳಿ ಹಣ ನೀಡಿ ಖಾಲಿ ಪೇಪರ್ ನಲ್ಲಿ ಸಹಿ ಪಡೆದಿದ್ದಾರೆ.
ದೂರು ಕೊಟ್ಟ ಯುವಕ ಎಲ್ಲಿದ್ದಾನೆ. ಈವರೆಗು ಆತ ಎಲ್ಲಿ ಹೋಗಿದ್ದಾನೆ ಎಂದು ಗೊತ್ತಿಲ್ಲ. ಆ ಮಹಿಳೆ ಬಳಿಯು ಈವರೆಗೂ 164 ಹೇಳಿಕೆ ಏಕೆ ದಾಖಲಿಸಿಲ್ಲ. ತೊಟ್ಟದವರು ಹೇಳಿದ್ದು ಕುರಿ ಮೇಯಿಸುತ್ತಿದ್ದರು ಎಂದು. ಆಕೆ ಅಲ್ಲಿ ಹೋಗಿದ್ದು ಸತ್ಯ. ಕುರಿ ಮೇಯಿಸುತ್ತಿದ್ದ ಮೇಲೆ ಕಿಡ್ನಾಪ್ ಹೇಗೆ ಆಗುತ್ತದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದ್ದಾರೆ.