ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಭಂದ
ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಆಗಲ್ಲ.
ಬಿಜೆಪಿ ಅಭ್ಯರ್ಥಿ ಡಾ.ಇ.ಸಿ.ನಿಂಗರಾಜೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು 35 ವರ್ಷದಿಂದ ಆರ್ಎಸ್ಎಸ್, ಎಬಿವಿಪಿ, ಬಿಜೆಪಿಯಲ್ಲಿ ದುಡಿದಿದ್ದೇನೆ.ಇದೆಲ್ಲವನ್ನೂ ಪರಿಗಣಿಸಿಯೇ ಬಿಜೆಪಿ ವರಿಷ್ಠರು ನನ್ನ ಹೆಸರು ಘೋಷಣೆ ಮಾಡಿದ್ದಾರೆ.
ಈ ಹಂತದಲ್ಲಿ ಅಭ್ಯರ್ಥಿ ಬದಲಾವಣೆ ಹೇಗೆ ಸಾಧ್ಯ ?
ಬಿಜೆಪಿ ಅಭ್ಯರ್ಥಿ ಘೋಷಿಸಿ ಮತ್ತೆ ಬದಲಾವಣೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ.ಜೆಡಿಎಸ್ ನಾಯಕರು ಗೊಂದಲ ಮೂಡಿಸಬಾರದು.ಒಂದು ಕ್ಷೇತ್ರಕ್ಕಾಗಿ ಜೆಡಿಎಸ್ ಹಠ ಮಾಡಬಾರದು ನನ್ನ ಪರವಾಗಿ ನಿಂತು ಕೆಲಸ ಮಾಡಬೇಕು.ನಾನು ಮೇ 16ರಂದು ಮೈತ್ರಿ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸುತ್ತೇನೆ.ಜೆಡಿಎಸ್ ವರಿಷ್ಠರೂ ಇದಕ್ಕೆ ಸಹಕಾರ ಕೊಡುತ್ತಾರೆ.ರೆಬಲ್ ಅನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೇವಲ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕಾಗಿ ಮೈತ್ರಿ ಮುರಿದುಕೊಳ್ಳುವುದಿಲ್ಲ ಎಂದು
ಮೈಸೂರಿನಲ್ಲಿ ಇ.ಸಿ ನಿಂಗರಾಜೇಗೌಡ ಹೇಳಿದರು