ಮೈಸೂರು : ಇಪ್ಪತ್ತು ವರ್ಷಗಳ ರಾಜಕೀಯ ವನವಾಸದ ಬಳಿಕ ನನಗೊಂದು ಅವಕಾಶ ಸಿಕ್ಕಿದೆ. ನನ್ನ ರಾಜಕೀಯ ಜೀವನದ 31 ವರ್ಷಗಳ ಅನುಭವದ ಕೇವಲ ಮೂರು ವರ್ಷಗಳು ಮಾತ್ರ ಅಧಿಕಾರ ಅನುಭವಿಸಿದ್ದು ಎಂದು ಬಿಜೆಪಿ ಚಾಮರಾಜನಗರ ಅಭ್ಯರ್ಥಿ ಬಾಲರಾಜ್ ಹೇಳಿದರು.
ಸುತ್ತೂರು ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2004 ರಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿ ಶಾಸಕನಾಗಿದ್ದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹಲವು ಪಕ್ಷಕ್ಕೆ ಹೋಗಿ ಬಂದಾಯ್ತು. ನಾನು ಅಂದಿನಿಂದ ಇಲ್ಲಿವರೆಗೂ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಬಂದಿದ್ದೇನೆ. 20 ವರ್ಷಗಳ ಬಳಿಕ ಒಂದು ಅವಕಾಶ ಸಿಕ್ಕಿದೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ.
ಹಾಲಿ ಶಾಸಕರಾದ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದರೂ ಅವರು ಬಿಜೆಪಿಯಲ್ಲೇ ಇದ್ದು ನನಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.
ಅವರ ಆಶೀರ್ವಾದ ನನ್ನ ಮೇಲೆ ಇರುತ್ತೆ ಎಂಬ ವಿಶ್ವಾಸ ಇದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ಬಿಜೆಪಿಗೆ ತನ್ನದೇ ಆದ ಹಿಡಿತ ಮತ್ತು ಸಾಂಪ್ರದಾಯಿಕ ಮತಗಳಿ ಇವೆ. ಜೊತೆಗೆ ನನಗೆ ಧ್ರುವನಾರಾಯಣ್ ಬೆಂಬಲಿಗರು, ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಎಲ್ಲರು ನನಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. 20 ವರ್ಷಗಳ ವನವಾಸದಿಂದ ನನಗೆ ಮುಕ್ತಿ ಸಿಗುವ ವಿಶ್ವಾಸ ಇದೆ.
ಟಿಕೇಟ್ ಸಿಗಲು ಇಂತಹವರೇ ಸಹಕಾರ ಹೆಚ್ಚು ಅಂತ ನಾನು ಹೇಳಲಾರೆ ಪಕ್ಷ ನನ್ನನ್ನ ಗುರ್ತಿಸಿ ಟಿಕೇಟ್ ಕೊಟ್ಟಿದೆ.
ಕ್ಷೇತ್ರದಲ್ಲಿ ಗೆದ್ದು ಬರುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದರು.