ನಂಜನಗೂಡು : 150 ಮಕ್ಕಳಿಗೆ ಒಂದು ಶೌಚಾಲಯ,ಮುರಿದ ಬಾಗಿಲು ಕಿಟಕಿಗಳು,ಕುಡಿಯುವ ನೀರಿಗೆ ಬವಣೆ,ಕೊಠಡಿಗಳ ಕೊರತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ವಸತಿ ಶಾಲೆ ಈ ಅಂಬೇಡ್ಕರ್ ವಸತಿ ಶಾಲೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯಾದ ವರುಣ ವಿಧಾನಸಭಾ ಕ್ಷೇತ್ರದಲ್ಲಿರುವ ಹದಿನಾರು ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯ ದುಃಸ್ಥಿತಿ ಇದು.
2017 ರಲ್ಲಿ ರಾಷ್ಟ್ರನಾಯಕನ ಹೆಸರಲ್ಲಿ ಆರಂಭವಾದ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಮಾಯವಾಗಿದೆ.ಕರ್ನಾಟಕ ವಸತಿ ಧಿಕ್ಷಣ ಸಂಸ್ಥೆಗಳ ಸಂಘದ ಯಾವೊಂದು ನಿಯಮವೂ ಇಲ್ಲಿ ಪಾಲನೆ ಆಗುತ್ತಿಲ್ಲ.ಸುಮಾರು 150 ಮಕ್ಕಳನ್ನ ಹೊಂದಿರುವ ಈ ವಸತಿ ಶಾಲೆಯಲ್ಲಿ ಗುಣಮಟ್ಟ ಮರೀಚಿಕೆಯಾಗಿದೆ.ಅಡಿಗೆಗೆ ಸಂಪ್ ನೀರು ಬಳಸಿಕೊಳ್ಳುತ್ತಿದ್ದಾರೆ.ವಿಧ್ಯಾರ್ಥಿಗಳನ್ನ ಹೀನಾಯವಾಗಿ ನೋಡಿಕೊಳ್ಳುತ್ತಿರುವ ಆಡಳಿತ ಮಂಡಳಿ ಬಗ್ಗೆ ಆಕ್ರೋಷ ವ್ಯಕ್ತವಾಗಿದೆ.ಅಂಬೇಡ್ಕರ್ ಬಗ್ಗೆ ಗಂಟೆಗಳ ಕಾಲ ಭಾಷಣ ಮಾಡಿ ಚೆಪ್ಪಾಳೆ ಗಿಟ್ಟಿಸುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನವರ ತವರೂರು ಇದು. ಸಿಎಂ ಕ್ಷೇತ್ರದಲ್ಲಿರುವ ವಸತಿ ಶಾಲೆಯ ದುಃಸ್ಥಿತಿ ಬಗ್ಗೆ ಡಾ.ಹೆಚ್.ಸಿ.ಮಹದೇವಪ್ಪರವರಿಗೆ ಮಾಹಿತಿಯೇ ಇಲ್ಲ.
ಇಲ್ಲಿನ ವಿಧ್ಯಾರ್ಥಿಗಳ ಬವಣೆಗೆ ಕೊನೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವಂತೆ ವಿಧ್ಯಾರ್ಥಿಗಳು ಒತ್ತಾಯಿಸಿದ್ದಾರೆ.ಪೋಷಕರೂ ಸಹ ಇಲ್ಲಿನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಧ್ಯಾರ್ಥಿಗಳು ಹಾಗೂ ಪೋಷಕರ ಸಹನೆಯ ಕಟ್ಟೆ ಒಡೆಯುವ ಮುನ್ನ ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ವಿಧ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಷಕ್ಕೆ ಗುರಿಯಾಗಬೇಕಾಗುತ್ತದೆ.