ಸುತ್ತೂರು ಶಾಖ ಮಠಕ್ಕೆ ಯಧುವೀರ್ ಭೇಟಿ
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಯಧುವೀರ್ ಗೆ ಪೂರ್ಣ ಕುಂಬ ಸ್ವಾಗತ ಕೋರಿದ ಮಠದ ಸಿಬ್ಬಂದಿ. ಮಾಲಾರ್ಪಣೆ ಮಾಡಿ ಯದುವೀರ್ ಅವರನ್ನು ಬರಮಾಡಿಕೊಂಡರು. ಸುತ್ತೂರು ದೇಶೀಕೇಂದ್ರ ಶ್ರೀಗಳಿಗೆ ಶಾಲು,ಹಾರ ಹಾಕಿ ಆಶೀರ್ವಾದ ಪಡೆದ ಯಧುವೀರ್.
ಬಳಿಕ ಕಲವು ಹೊತ್ತು ಕುಷಲೋಪರಿ ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ರಾಜ ಎಂಬ ಸಿಎಂ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದರು. ಸಿಎಂ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ.
ಆ ವಿಚಾರದ ಬಗ್ಗೆ ನಾನು ಹೇಗೆ ಪ್ರತಿಕ್ರಿಯೆ ಕೊಡಲಿ ಎಂದು ಜಾಣ್ಮೆಯ ಉತ್ತರ ನೀಡಿದರು.
ನಾನು ಈಗಾಗಲೇ ಹೇಳಿದ್ದೇನೆ, ಸಂವಿಧಾನದಲ್ಲಿ ರಾಜ ರಾಣಿ ಎಂಬ ಯಾವುದು ವಿಶೇಷ ಮಹತ್ವ ಇಲ್ಲ.
ಎಲ್ಲರೂ ಪ್ರಜೆಗಳೇ ಇಷ್ಟನ್ನು ಮಾತ್ರ ನಾನು ಹೇಳಬಲ್ಲೇ.
ಸುತ್ತೂರು ಸ್ವಾಮೀಜಿಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಬೇರೆ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಚುನಾವಣಾ ಪ್ರಚಾರ ಎಂದಿನಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ದಿನಾಂಕ ಇನ್ನೂ ಎರಡು ಮೂರು ದಿನಗಳಲ್ಲಿ ತೀರ್ಮಾನವಾಗುತ್ತದೆ. ಮೋದಿ ಪ್ರಚಾರಕ್ಕೆ ಬರುವ ಬಗ್ಗೆ ನನಗೆ ಇನ್ನೂ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಯದುವೀರ್ ಹೇಳಿದರು.