ಮೈಸೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ಜನ್ಮದಿನಾಚರಣೆ ಅಂಗವಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು 101 ಗಣಪತಿ ದೇವಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಮಾ ವಿ ರಾಮಪ್ರಸಾದ್ ಎಂ ಡಿ ಪಾರ್ಥ ಸಾರಥಿ, ಜಗದೀಶ್, ಹಾಗೂ ಬಿಜೆಪಿ ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಸುತ್ತೂರು ಶ್ರೀಕಂಠ ಮೂರ್ತಿ, ಬಿಜೆಪಿ ಎನ್ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಹಾಗೂ ಮುಖಂಡರುಗಳಾದ ಸಂದೀಪ್, ಚಂದ್ರಶೇಖರ್,ಶಿವರಾಜು, ಹೂಟಗಳ್ಳಿ ನಾಗರಾಜು, ಬಸವರಾಜು, ಹಾಗೂ ವೀರಗಾಸೆ ಕಲಾವಿದರಾದ ಅಂಬಾಳೆ ಶಿವಣ್ಣ, ಕಾಪು ಸಿದ್ದಿ ಲಿಂಗಸ್ವಾಮಿ ಸ್ನೇಹ ಬಳಗದ ಉಪಾಧ್ಯಕ್ಷರಾದ ಸಚಿಂದ್ರ, ಪಾರ್ವತಪ್ಪ, ನಂದನ್, ದರ್ಮೆಂದ್ರ,ಮಹದೇವಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು