ಮೈಸೂರು: ಕಾಮಗಾರಿ ನಡೆಸದೇ ಬಿಲ್ ಪಾವತಿ ಮಾಡಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಪಿಡಿಓ ಮಧುರ ಅವರಿಂದ ಅಕ್ರಮ ಮಾಡಿದ್ದಾರೆ ಎಂದು ಜನರು ಆರೋಪ ಮಾಡಿದ್ದಾರೆ, ಗುತ್ತಿಗೆದಾರ ಗೋಪಾಲಯ್ಯ ಖಾತೆಗೆ 79,300 ರೂಪಾಯಿ ಹಣ ಜಮೆ ಮಾಡಿರುವ ಪಿಡಿಓ. ನೀರಿನ ಟ್ಯಾಂಕ್ ಕಾಮಗಾರಿ ಮಾಡದೇ ಬಿಲ್ ಪಾವತಿ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿರುವ ಹಿರಿಯ ಅಧಿಕಾರಿಗಳು. ಗ್ರಾಮಸ್ಥರು ದೂರು ನೀಡಿದರೂ ಕ್ರಮ ಕೈಗೊಳ್ಳದ ಎಚ್.ಡಿ.ಕೋಟೆ ತಾಲೂಕು ಪಂಚಾಯತ್ ಇಓ ಧರಣೀಶ್.
ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮಗಳು ಮಿತಿ ಮೀರಿದ್ದು, ಸಂಭಂದ ಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದ್ದ ಇಓಗಳು ಯಾವುದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಇಓ ಗಳಿಗೆ ಬಿಸಿ ಮುಟ್ಟಿಸಬೇಕಿದ್ದ ಜಿಲ್ಲಾ ಪಂಚಾಯಿತಿ ಸಿಇಓ ಗಾಯತ್ರಿ ಅವರು ಇನ್ನಾದರೂ ಹೆಚ್ಚೆತ್ತುಕೊಂಡು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಗ್ರಾಮ ಪಂಚಾಯಿತಿಗಳಿಗೆ ಕುದ್ದು ಭೇಟಿ ನೀಡಬೇಕು ಎಂಬುದು ನಮ್ಮ ರಾಜ್ಯಧರ್ಮ ದಿನಪತ್ರಿಕೆಯ ಹಾಗೂ ಡಿಜಿಟಲ್ ವಾಹಿನಿಯ ಕಳಕಳಿಯಾಗಿದೆ.