ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಇಂದು ಪಕ್ಷದ ಅಭ್ಯರ್ಥಿ ನಾರಾಯಣಸಾ ಕೆ ಭಾಂಡಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ ಹಾಕಿದರು.
ಮಾನ್ಯ ಭಾಂಡಗೆ ಅವರ ಆಯ್ಕೆ ನಿಶ್ಚಿತವಾಗಿದ್ದು, ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಯಶಸ್ವಿಯಾಗಿ ಪ್ರತಿನಿಧಿಸಿ, ಪಕ್ಷ ಸಂಘಟನೆಗೆ ಮಹತ್ವದ ಕೊಡುಗೆ ನೀಡಲೆಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕರಾದ ಶ್ರೀಅಶೋಕ್ ಪಕ್ಷದ ಶಾಸಕರು ಉಪಸ್ಥಿತರಿದ್ದರು.