ಮೈಸೂರು : ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರೈತ ಗಿರಿಗೌಡ 52 ಸಾವು.
ಮೂರು ದಿನದ ಹಿಂದೆ ಕ್ರಿಮಿನಾಶಕ ಸೇವನೆ ಮಾಡಿದ್ದ
ಹೆಚ್ ಡಿ ಕೋಟೆ ಕಣಿಯನ ಹುಂಡಿ ಗ್ರಾಮ ಗಿರಿಗೌಡ.
1.5 ಎಕರೆ ಜಮೀನು ಹೊಂದಿದ್ದ ರೈತ ಗಿರಿಗೌಡ
ಜಮೀನು ಸ್ವಾಧೀನಕ್ಕೆ ಅರಣ್ಯ ಇಲಾಖೆ ನೋಟಿಸ್ ಹಿನ್ನೆಲೆ
ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನ ಎಂದು ಆರೋಪ.ಕ್ರಿಮಿನಾಶಕ ಸೇವಿಸಿದ್ದ ಗಿರಿಗೌಡಗೆ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವು.ಹೆಚ್ ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲು.