ಮೈಸೂರು : ಹರಿಯಾಣದಲ್ಲಿ ರೈತರ ಮೇಲೆ ಗೋಲಿಬಾರ್ ರೈತ ಸಾವು ಪ್ರಕರಣಕ್ಕೆ ಸಂಭಂದಿಸಿದಂತೆ ಕೇಂದ್ರ ಸರ್ಕಾರದ ನಡೆ ಖಂಡಿಸಿ ಮೈಸೂರಿನಲ್ಲಿ ಬೀದಿಗಿಳಿದ ಅನ್ನದಾತರು ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ಹೊರ ಹಾಕಿ,
ಪ್ರಧಾನಿ ಶವಯಾತ್ರೆ ಮಾಡಿದರು.ಮೈಸೂರು ಗನ್ ಹೌಸ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಶವಯಾತ್ರೆ ನಡೆಸಿದರು ಈ ವೇಳೆ ಶವಯಾತ್ರೆ ತಡೆಯಲು ಪೋಲಿಸರ ಯತ್ನ ನಡೆಸಿದರು. ಪೋಲಿಸರು ಮತ್ತು ರೈತರ ನಡವೆ ಮಾತಿನ ಚಕಮಕಿ ನಡೆಯಿತು. ಅಣಕು ಶವ ಸುಡಲು ಯತ್ನಿಸಿದ ರೈತರು ಪೋಲಿಸರಿಂದ ತಡೆ ನೀಡಿದರು.
ಪೋಲಿಸರ ನಡೆಗೆ ಅನ್ನದಾತ ಕಿಡಿಕಾರಿ
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದಿಂದ ಘೋಷಣೆ ಕೂಗಿದರು.