ಮೈಸೂರು : ಮಂಡ್ಯ ಬಂದ್ ವಿಚಾರ
ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗೆ ಸುಳ್ಳೇ ಮನೆದೇವ್ರು.
ಗಲಾಟೆ, ಗದ್ದಲ ಸೃಷ್ಟಿಸುವುದರಲ್ಲಿ ಬಿಜೆಪಿಗರು ನಿಸ್ಸಿಮರು.
ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಮಂಡ್ಯದಲ್ಲಿ ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮಂಡ್ಯದ ಜನರು ಮುಗ್ದರು, ಅವರಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಮುಂದಾಗಿದೆ. ಮಂಡ್ಯದ ಜನರನ್ನು ದೂರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ತೆರಳಿದ ವಿಚಾರ.
ಇದು ಸುಳ್ಳು, ಅವರು ಮಾಂಸ ತಿಂದಿದ್ದನ್ನು ಬಿಜೆಪಿಗರು ಹೋಗಿ ನೋಡಿದ್ರಾ? ಬಿಜೆಪಿಗರಿಗೆ ಈ ರೀತಿ ಸುಳ್ಳು ಹಬ್ಬಿಸೋದು ಬಿಟ್ಟು ಬೇರೇನೂ ಗೊತ್ತಿದೆ.
ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುತ್ತಾರೆ.
ನಿರುದ್ಯೋಗ, ಬಡತನ, ಇಂತಹ ವಿಚಾರಗಳು ಬಿಜೆಪಿಗರ ತಲೆಗೆ ಬರುವುದಿಲ್ಲ. ಅದ್ಯಾವುದೂ ಸುಳ್ಳಿನ ವಿಚಾರಗಳನ್ನು ಇಟ್ಟು ಗಲಾಟೆ ಹಬ್ಬಿಸುವ ಕೆಲಸ ಬಿಜೆಪಿಯಾದ್ದಾಗಿದೆ.
ಎಂದು ಎಂಎಲ್ಸಿ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.