ಮೈಸೂರು : 2024 ಕ್ಕೆ ಮತ್ತೊಮ್ಮೆ ಮೋದಿ ಎಂಬ ಬಿಜೆಪಿ ಅಭಿಯಾನಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡಿದೆ.
ಮುಂದಿಲ್ಲ ಮೋದಿ ಎಂಬ ಗೋಡೆ ಬರಹದೊಂದಿಗೆ ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ.
ಮೈಸೂರಿನಲ್ಲಿ ಕೈ ನಾಯಕರಿಂದ ನೂತನ ಅಭಿಯಾನ ಆರಂಭವಾಗಿದ್ದು, ಭ್ರಷ್ಟ,ಏಕಾಚಕ್ರಾಧಿಪತ್ಯ ಮಾಡುವ ಮೋದಿ ಬರಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಮಸ್ವಾಮಿ ವೃತ್ತದ ಬಳಿ ಗೋಡೆಗೆ ಸ್ಟಿಕ್ಕರ್ ಅಂಟಿಸಿ ಗೋಡೆ ಬರಹ ಬರೆದು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಮಾಜಿ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಬರಲ್ಲ ಬರಲ್ಲ ಮೋದಿ ಬರಲ್ಲ ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು
ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.