ಚಾಮರಾಜನಗರ : ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಬೇಗುರು ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಬಡ ರೈತ ಬಸವನಾಯಕ ಎಂಬ ರೈತನ ಜೀವನಕ್ಕೆಅಸರೆಯಾಗಿದ್ದ ಕುರಿ ಮೇಕೆ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು 25 ಕುರಿ ಮತ್ತು ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ ವೇಳೆ ಕಳ್ಳರು ಸುತ್ತಮುತ್ತ ಮನೆಗಳಿಗೆ ಬೀಗ ಜಡಿದು ಚಿಕ್ಕ ಪುಟ್ಟ ಮರಿಗಳನ್ನು ಬಿಟ್ಟು ದೊಡ್ಡ ಮರಿಗಳನ್ನು ಕಳ್ಳತನ ಮಾಡಿದ್ದಾರೆ. ಕುರಿಯನ್ನು ನಂಬಿ ಬದುಕು ಸಾಗಿಸುತ್ತಿದ್ದ ಬಸವನಾಯಕ ದಿಕ್ಕು ತೋಚದೇ ಬದುಕು ನಿರ್ವಹಿಸಲು ಕಷ್ಟವಾಗಿದೆ. ಈ ಪ್ರಕರಣ ಬೇಗುರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.