ಕನ್ನಡ ನಾಮಪಲಕಗಳ ಸುಗ್ರೀವಾಜ್ಞೆಯನ್ನು ವಿಧಾನಮಂಡಲ ಕಲಾಪದಲ್ಲಿ ಬಗೆಹರಿಸಿಕೊಳ್ಳಿ ಎಂದು ವಿಳಂಬ ಮಾಡಿದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಸರ್ಕಾರ ಆದೇಶದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಮತ್ತು ಜಾಹೀರಾತು ಪಲಕಗಳಿಗೆ ಶೇಕಡ 60ರಷ್ಟು ಕನ್ನಡದಲ್ಲಿ ಇರಬೇಕೆಂದು ಸರ್ಕಾರ ಆದೇಶ ಮಾಡಿ ಸಂಬಂಧ ಪಟ್ಟ ಇಲಾಖೆಗಳಿಗೆ ಜವಾಬ್ದಾರಿಯನ್ನು ವಹಿಸಿತ್ತು ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲನ್ನು ಮೊರೆ ಹೋಗುತ್ತಾರೆ ಎಂದು ಸರ್ಕಾರ ರಾಜ್ಯಪಾಲರಿಗೆ ಕನ್ನಡದಲ್ಲಿ ಕಡ್ಡಾಯವಾಗಿ 60ರಷ್ಟು ನಾಮಫಲಗಳು ಇರಬೇಕು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೇವೆ ಎಂದು ರಾಜ್ಯಪಾಲರ ಮೊರೆ ಹೋಗಿತ್ತು. ಆದರೆ ರಾಜ್ಯಪಾಲರು ನೀವೇ ವಿಧಾನ ಮಂಡಲದಲ್ಲಿ ಬಗೆಹರಿಸಿಕೊಳ್ಳಿ ಎಂದು ಸುಗ್ರೀವಾಜ್ಞೆಯನ್ನು ತಡೆ ಹಿಡಿದಿದ್ದಾರೆ. ಈಗಾಗಲೇ ಎರಡು ಗಡವು ಕೊಟ್ಟಿದ್ದರು ಸಹ ನಾಮಫಲಕಗಳು ಯಥಾಸ್ಥಿತಿಯಲ್ಲಿದೆ ವಿಧಾನ ಮಂಡಲದ ಕಲಾಪ ತಡವಾಗಿದ್ದರಿಂದ ರಾಜ್ಯಪಾಲರಿಗೆ ಆದೇಶ ಪ್ರತಿಯನ್ನು ಕಳಿಸಿದರೂ ರಾಜ್ಯಪಾಲರು ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಕೇಂದ್ರದ ಬಜೆಟ್ ಆದ ನಂತರ ಯಾವ ಕ್ಷಣವಾದರೂ ಚುನಾವಣೆಯ ನಡೆಯುವ ಸಂದರ್ಭ ಇದೆ ಆಗ ವಿಧಾನ ಮಂಡಲದಲ್ಲಿ ಕಲಾಪ ನಡೆಯುವುದಿಲ್ಲ ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಮೊರೆ ಹೋಗಿದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ರಾಜ್ಯಪಾಲರು ತಿರಸ್ಕರಿಸಿರುವುದು ಸರಿಯಲ್ಲ..
ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಕೆಲವೊಂದು ವಿಷಯಗಳನ್ನು ವಿಧಾನಸಭೆ ಮಂಡಲದಲ್ಲಿ ಚರ್ಚಿಸಲು ತಡವಾದಾಗ ಈ ರೀತಿಯ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳ ಬೆಂಬಲ ಇರುವುದರಿಂದ ರಾಜ್ಯಪಾಲರು ಸಹಿ ಮಾಡಬಹುದಾಗಿತ್ತು.
ಕನ್ನಡ ನಾಮ ಫಲಕ ವಿಷ್ಯ ಯಾವುದೇ ರೀತಿಯ ಗೊಂದಲದ ವಿಷಯವಲ್ಲ ನಮ್ಮ ನಾಡಿನ ಭಾಷೆಯ ವಿಷಯ ಹೀಗೆ ನೋಡಿದರೆ ಪಕ್ಕದ ರಾಜ್ಯಗಳಲ್ಲಿ ಈ ವಿಷಯಕ್ಕೆ ರಾಜ್ಯಪಾಲರ ಮೊರೆ ಹೋಗುವುದಿಲ್ಲ ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳೇ ತೀರ್ಮಾನ ಅಂತಿಮ ತೀರ್ಮಾನವಾಗಿರುತ್ತದೆ ರಾಜ್ಯಪಾಲರಿಗೆ ಅನುಮೋದನೆ ನೀಡುವುದಕ್ಕೆ ಕಳಿಸಿರುವುದು ಸರಿಯಲ್ಲ ತಾವೇ ಸ್ವತಹ ನಿರ್ಧಾರ ಕೈಗೊಳ್ಳಬಹುದು ಇದರಲ್ಲಿ ಕೆಲವು ದೊಡ್ಡ ದೊಡ್ಡ ಮಾಲ್ ಗಳ ಕೈವಾಡವಿದೆ ಎಂದು ಶಂಕೆ ಬರುತ್ತದೆ. ಕೂಡಲೇ ಸರ್ಕಾರ ರಾಜ್ಯಪಾಲರು ಬಿಟ್ಟಾಕಿ ಕನ್ನಡದ ನಾಮಪಲಕದ ಆದೇಶವನ್ನು ಜಾರಿಗೆ ಬರುವಂತೆ ಮಾಡಬೇಕೆಂದು ಮೈಸೂರು ಕನ್ನಡ ವೇದಿಕೆ ಸದಸ್ಯರು ಒತ್ತಾಯ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷರಾದ ಎಸ್ ಬಾಲಕೃಷ್ಣ, ನಾಲಾ ಬೀದಿ ರವಿ, ಗುರುಬಸಪ್ಪ, ಗೋಪಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಎಲ್ಐಸಿ ಸಿದ್ದಪ್ಪ, ಸ್ವಾಮಿಗೌಡ, ಬೀಡಾ ಬಾಬು, ಸ್ವಾಮಿ ಗೈಡ್, ಮಾಲಿನಿ, ಭವಾನಿ, ಪುಷ್ಪ, ಮದನ್, ಮಹದೇವ್ ಸ್ವಾಮಿ, ಹರೀಶ್, ಅರವಿಂದ, ಮಾದಪ್ಪ, ಮುಂತಾದವರಿದ್ದರು.