ಮೈಸೂರು : ಕೇಂದ್ರ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆ ಹಿನ್ನೆಲೆ ಮಾಜಿ ಸಚಿವ ಎಸ್ ಎ ರಾಮದಾಸ್ ನಗರದ ಪತ್ರಕರ್ತರ ಭವನದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದರು.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆ.
ಇಡೀ ಭಾರತ ಮಾತ್ರವಲ್ಲ ವಿಶ್ವವೆ ಭಾರತದತ್ತ ತಿರುಗಿ ನೋಡುತ್ತಿತ್ತು.ಜೊತೆಗೆ ವಿಪಕ್ಷಗಳು ಕೂಡ ಕಾಲೆಳೆಯಲಿಕ್ಕೆ ಸಿದ್ದವಾಗಿದ್ದವು.ಚುನಾವಣೆ ಏಪ್ರಿಲ್ ತಿಂಗಳಿನಲ್ಲಿರುವ ಕಾರಣ.ಇದೊಂದು ಚುನಾವಣೆ ಬಜೆಟ್ ಎಂದು ಹೇಳಲು ಮುಂದಾಗುತ್ತಿದ್ದವು.ಆದರೆ ಕೇಂದ್ರ ಸರ್ಕಾರ ಯಾವುದೇ ಚುನಾವಣೆ ಭರವಸೆ ನೀಡದೆ 140 ಕೋಟಿಭಾರತೀಯರಿಗೆ ಉತ್ತಮ ಬಜೆಟ್ ಮಂಡನೆ ಮಾಡಿದೆ ಎಂದರು.
ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಚುನಾವಣೆ ಬಜೆಟ್ ಅಲ್ಲ.ಖಾಸಗಿ ಸಂಸ್ಥೆ, ಜನಸಾಮಾನ್ಯರನ್ನೆಲ್ಲ ಒಳಗೊಂಡ ಬಜೆಟ್ ಇದಾಗಿದೆ.
ಯಾವುದೇ ಇನ್ನಿತರ ತೆರಿಗೆಗಳನ್ನ ಹೆಚ್ಚು ಮಾಡದೇ ಆರ್ಥಿಕ ಅಭಿವೃದ್ಧಿಗೆ ಮುಂದಾಗಿದೆ. ಇದು ಸಪ್ತರುಷಿ ಬಜೆಟ್ ಎಂದು ರಾಮದಾಸ್ ಹಾಡಿ ಹೊಗಳಿದರು