ಮೈಸೂರು : ಗಣ ರಾಜ್ಯೋತ್ಸವದಲ್ಲಿ ರಾಜ್ಯದ ಸ್ಥಬ್ದಚಿತ್ರಕ್ಕೆ ಅವಕಾಶ ಸಿಗದ ಹಿನ್ನೆಲೆ ಕೇಂದ್ರದ ವಿರುದ್ಧ ಸಚಿವ ಡಾ ಎಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಸ್ಥಬ್ದ ಚಿತ್ರಗಳಿಗೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರವು ಗಣತಂತ್ರ ವ್ಯವಸ್ಥೆಗೆ ಅಪಚಾರ ಎಸಗಿದೆ.ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಹಣ ಸಂಗ್ರಹಿಸುವುದನ್ನು ಬಿಟ್ಟರೆ ಇವರಿಂದ ಕರ್ನಾಟಕ ರಾಜ್ಯಕ್ಕೆ ಕಿಂಚಿತ್ ಸಹಕಾರ ಇಲ್ಲ.
ಇವರು ತೆರಿಗೆ ಹಣದ ಪಾಲನ್ನು ಕೇಳಿದರೆ ಕೊಡುವುದಿಲ್ಲ
ಬರ ಪರಿಹಾರ ಕೇಳಿದರೆ ಜಾಣ ಕುರುಡು ಪ್ರದರ್ಶಿಸುತ್ತಾರೆ
ಬಡವರ ಹಸಿವಿಗೆ ಬೇಕಾದ ಅನ್ನಭಾಗ್ಯ ಅಕ್ಕಿ ವಿಚಾರ
ಅದನ್ನು ಕೊಂಡುಕೊಳ್ಳಲು ಕೇಳಿದರೆ ಸಾರ್ವಜನಿಕರಿಗೆ ಸೇರಿದ ಕೇಂದ್ರ ಆಹಾರ ನಿಗಮವು ಇವರ ಸ್ವಯಂ ಆಸ್ತಿಯೇನೋ ಎಂಬಂತೆ ವರ್ತಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಸೋಲಿಗೆ ಸೇಡು ತೀರಿಸಿಕೊಳ್ಳುವಂತೆ ಕೇಂದ್ರವು ವರ್ತಿಸುತ್ತಿದೆ
ಇವರ ವರ್ತನೆಯು ನಿಜಕ್ಕೂ ಗಣತಂತ್ರ ವ್ಯವಸ್ಥೆಯ ಒಳಗೆ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದುಸಾಮಾಜಿಕ ಜಾಲತಾಣದಲ್ಲಿ ಸಚಿವ ಡಾ ಎಚ್ ಸಿ ಮಹದೇವಪ್ಪ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ