ಮೈಸೂರು : ಮೈಸೂರಿನಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು,
ನಂಜನಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ 3 ಕಾಡಾನೆಗಳ ಪ್ರತ್ಯಕ್ಷವಾಗಿರುವುದು ಕಂಡು ಬಂದಿದೆ.
ಸುತ್ತಮುತ್ತಲ ಜಮೀನುಗಳಲ್ಲಿ ರೈತರ ಫಸಲುಗಳನ್ನು ನಾಶ ಮಾಡಿರುವ ಕಾಡಾನೆಗಳು, ಕೊಣನೂರು ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಆನೆಗಳು ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗೆ ವಾಪಸ್ಸು ಕಳುಹಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ