ಮೈಸೂರು : ಮೈಸೂರಿನ ಜಿಲ್ಲಾ ಪೊಲೀಸ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರಿನ ಡಿಸಿ 11 ತಂಡ ಗೆಲುವು ಸಾಧಿಸಿದೆ. ಮೈಸೂರಿನ ಪಯರ್ ರೇಂಜ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೈಸೂರಿನ ಪತ್ರಕರ್ತರು ಭಾಗವಹಿಸಿ ಕ್ರೀಡಾ ಕೂಡದಲ್ಲಿ ಗಮನ ಸೆಳೆದರು.
ಮೈಸೂರಿನ ಡಿಸಿ11 ಹಾಗೂ ಸಿಪಿ ಪಂದ್ಯಾವಳಿಯಲ್ಲಿ ನಡೆದ 10 ಓವರ್ ಗಳ ಕ್ರೀಡಾ ಕೂಟದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡಿಸಿ 11 ತಂಡ ಹತ್ತು ಓವರ್ ಗಳಲ್ಲಿ 128 ಗಳಿಸಿದ್ರು, ಮೈಸೂರಿನ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಅತ್ಯುತ್ತಮ ಬ್ಯಾಟಿಂಗ್ ಮಾಡಿ ಭರ್ಜರಿ 43 ರನ್ ಗಳಿಸಿದ್ರು, ಅಂತಿಮವಾಗಿ ಡಿಸಿ 11 ತಂಡದ 129 ರನ್ ಬೆನ್ನಟ್ಟಿದ ಸಿಟಿ ಪೊಲೀಸ್ ತಂಡ 4 ವಿಕೆಟ್ ಕಳೆದುಕೊಂಡು 119 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಂತಿಮವಾಗಿ 10 ರನ್ ಗಳ ಮೂಲಕ ಮೈಸೂರಿನ ಜಿಲ್ಲಾಧಿಕಾರಿಗಳ ನೇತೃತ್ವದ ಡಿಸಿ11 ತಂಡ ಗೆಲುವು ಸಾಧಿಸಿತ್ತು. ಪತ್ರಕರ್ತ ತಂಡ ಕೂಡ ಸೌಹಾರ್ದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಗಮನ ಸೆಳೆಯಿತು.