ಮೈಸೂರು: ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಪ್ರತಿಭಟಿಸಿತು.
ನಗರದ ಉಪನಿರ್ದೇಶಕರ ಕಚೇರಿಯ ಮುಂಭಾಗ ಜಮಾವಣೆಗೊಂಡ ಅತಿಥಿ ಉಪನ್ಯಾಸಕರು ಖಾಯಂ ಮಾಡುವಂತೆ ನಾನಾ ಘೋಷಣೆಗಳನ್ನು ಕೂಗಿದರು. ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಾದ್ಯಾಪಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಸರ್ಕಾರ ಅತಿಥಿ ಉಪನ್ಯಾಸಕರ ಖಾಯಂಗೊಳಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಡಾ.ಆರ್.ವೆಂಕಟೇಶ್, ಡಿ.ನಾಗರ್ಜುನ್, ಕೆಂಪನಂಜಪ್ಪ, ವಿನಾಮತ್, ಹನುಮಂತ್ ಇನ್ನಿತರ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿದ್ದರು.
ಅತಿಥಿ ಉಪನ್ಯಾಸಕರ ಖಾಯಂಗೆ ಆಗ್ರಹ
Leave a comment
Leave a comment