ಮೈಸೂರು : ಹೋರಾಟಗಾರರು ಕೆಲವು ನಿಂದನೆಗಳನ್ನ ಅನುಭವಿಸಬೇಕಾಗುತ್ತದೆ.ಆ ಸಾಲಿನಲ್ಲಿ ನಾವು ಇದ್ದೇವೆ.
ನಿನ್ನೆ ರೈತ ಮುಖಂಡ ಅಂತ ಹೇಳಿಕೊಂಡು ಇಂಗಲಕುಪ್ಪೆ ಕೃಷ್ಣೇಗೌಡ ಎಂವ ವ್ಯಕ್ತಿ ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳುಗಳಿಂದ ಕೂಡಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ದುರುದ್ದೇಶ ಪೂರ್ವಕವಾಗಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮಾಡಿರುವ ಹುನ್ನಾರ.ಅವನು ಮಾಡಿರುವ ಆರೋಪಗಳಿಗೆ ನಾನು ಯಾವುದೇ ತನಿಖೆಗೂ ಸಿದ್ದ.
ನಾನು ಅಕ್ರಮ ಆಸ್ತಿ ಹಣ ಸಂಪಾದನೆ ಮಾಡಿದ್ದರೆ ಅವುಗಳನ್ನೇಲ್ಲ ಮುಟ್ಟುಗೋಲು ಹಾಕಿಕೊಳ್ಳಲಿ.
ಈತ ಒಬ್ಬ ಕ್ರಿಮಿನಲ್ ಹಿನ್ನಲೆ ಉಳ್ಳವನು.
ಇವನು ಮತ್ತು ಇವನ ಜೊತೆ ಇರುವ ಸಂಗಡಿಗರು ಮೈಸೂರು, ಮಂಡ್ಯ,ಚಾಮರಾಜನಗರ ಜಿಲ್ಲೆಗಳಲ್ಲಿ ಅತ್ಯಾಚಾರ, ಡಕಾಯಿತಿ,ವಂಚನೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳು ಇವರ ಮೇಲೆ ಇವೆ.
ಎಫ್ಐಆರ್ ಗಳ ಸಮೇತ ರಾಜ್ಯ ರೈತ ಸಂಘ(ರೈತ ಬಣ) ರಾಜ್ಯಾಧ್ಯಕ್ಷ ಕೃಷ್ಣೇಗೌಡ ಮೇಲೆ ಆತ ಒಬ್ಬ ಡಕಾಯಿತಿ,ಒಬ್ಬ ರೌಡಿ ಶೀಟರ್ ಈತ.ಇವನ ಮೇಲೆ 12 ಕೋಟಿ ಮೌಲ್ಯದ ಹಗರಣ ಇದೆ.ಸಾಕಷ್ಟು ವಂಚನೆ ಕೇಸ್ ಗಳಿವೆ ಈ ರೀತಿಯ ಹಿನ್ನಲೆ ಇರುವ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ ಎಂದರು.
ನಾನು ಅಕ್ರಮ ಆಸ್ತಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾನೆ.ನಾವು ಸಾವಯವ ಕೃಷಿ ಮಾಡಲು ಆಸ್ತಿ ಖರೀದಿ ಮಾಡಿರುವುದು ನಿಜ.ನಾನೊಬ್ಬ ಕೃಷಿಕನಾಗಿ ನೈಸರ್ಗಿಕ ಕೃಷಿ ಮಾಡಲು ಜಮೀನು ಖರೀದಿ ಮಾಡಿದ್ದೇನೆ.
ಯಾವುದೇ ರಾಜಕಾರಣಿಗಳ ಜೊತೆ ಒಳ ಸಂಬಂಧ ಇಟ್ಟು ನಾನು ಸಂಪಾದನೆ ಮಾಡಿಲ್ಲ.ನೀನೊಬ್ಬ ಪಸಿಗೆ ಎತ್ತೋನು ನೀನು ನೀನು ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗೆ ಇಲ್ಲ.ನಾನು ಕದ್ದು ಮುಚ್ಚಿ ಆಸ್ತಿ ಮಾಡಿಲ್ಲ.
ಇವನ ತರ ಹಸಿರು ಟವಲ್ ಹಾಕಿಕೊಂಡು ಜನರಿಗೆ ವಂಚನೆ ಮಾಡಿಲ್ಲ. ಹೋರಾಟಕ್ಕಾಗಿ ಕಡಲೇ ಪುರಿ ತಿಂದುಕೊಂಡು ಹೋರಾಟ ಮಾಡಿಕೊಂಡು ಬಂದಿದ್ದೇನೆ.
ನಮ್ಮ ವಂಶ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದಂತ ವಂಶ.ದಾನ ಧರ್ಮ ಮಾಡಿದ ವಂಶ ನಮ್ಮದು ಎಂದರು.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತರನ್ನ ಸ್ವಂತವಾಗಿ ಜೀತ ವಿಮುಕ್ತಿ ಮಾಡಿಸಿದ್ದ ಕುಟುಂಬ ನಮ್ಮದು.
41 ವರ್ಷದ ಹೋರಾಟದ ಇತಿಹಾಸದಲ್ಲಿ ಯಾವುದೇ ಅನೈತಿಕ ಚಟುವಟಿಕೆ ಮಾಡಿಲ್ಲ.ನನಗೆ ವಕೀಲ ವೃತ್ತಿಯನ್ನೂ ಮಾಡುತ್ತಿದ್ದೇನೆ.ನನ್ನ ವಕೀಲ ವೃತ್ತಿಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಕೇಸ್ ನಡೆಸಿದ್ದೇನೆ.
ನಮ್ಮ ವೃತ್ತಿಯಲ್ಲೂ ಕೂಡ ನಾನು ಸ್ವಚ್ಛವಾಗಿದ್ದೇನೆ.
ಕಷ್ಟ ಅಂತ ಬಂದವರಿಗೆ ಉಚಿತವಾಗಿ ಕೇಸ್ ನಡೆಸಿಕೊಟ್ಟಿದ್ದೇನೆ.ನಾನು ಆ ರೀತಿ ಮಾಡಿದ್ದರೇ ಎಷ್ಟು ಮಾಡಬಹುದಿತ್ತು. ಭೂ ಸ್ವಾಧೀನ ಪ್ರಕರಣಗಳಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ.ನಾನು ನನ್ನದೇ ಆದ ಸಿದ್ದಾಂತ,ಎಥಿಕ್ಸ್ ಇಟ್ಟುಕೊಂಡು ಜೀವನ ಮಾಡವ ವ್ಯಕ್ತಿ.
ನಾನು ಹಣ ಮಾಡಬೇಕು ಅಂದುಕೊಂಡಿದ್ದರೆ ನೂರಾರು ಕೋಟಿ ನನ್ನ ವೃತ್ತಿಯಲ್ಲೇ ಮಾಡಬಹುದು.
ನಾನು ಮನಸ್ಸು ಮಾಡಿದ್ದರೆ ಎಂಎಲ್ಎ ಆಗಬಹುದಿತ್ತು.
ಅಕ್ರಮ ಅಂತ ಆರೋಪ ಮಾಡಿರುವ ವ್ಯಕ್ತಿ ಅದನ್ನು ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು.
ಆತ ಒಬ್ಬ ಅವಿವೇಕಿ ಅವನು ಮಾಡಿದ ಆರೋಪಗಳು ಸಾಬೀತು ಪಡಿಸಲಿ.ಅವನ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ.ನನ್ನನ್ನ ಕಾಂಗ್ರೆಸ್ ಬ್ರೋಕರ್ ಅಂತ ಹೇಳಿದ್ದಾನೆ.ಕಾಂಗ್ರೆಸ್ ವಿರುದ್ಧ ಹೋರಾಡಿದವರು ನಾವು.
ಯಾವುದೇ ರಾಜಕಾರಣಿ ಜೊತೆ ಹಲ್ಲುಗಿಂಜಿಕೊಂಡು ಎಲ್ಲೂ ಹೋಗಿಲ್ಲ.41 ವರ್ಷಗಳ ನನ್ನ ಹೋರಾಟದ ಜೀವನದಲ್ಲಿ ಒಂದೇ ಒಂದು ಪೈಸೆ ಯಾರಿಂದಲೂ ಪಡೆದಿಲ್ಲ ಇದ್ದರೆ ಸಾಬೀತು ಪಡಿಸಲಿ.
ಕಬ್ಬು ನಿಯಂತ್ರಣ ಮಂಡಳಿ ಸದಸ್ಯರಾಗಿರುವುದು ನಿಜ.
ಅದನ್ನ ನಮ್ಮ ಸಂಘದ ಮುಂದೆ ಇಟ್ಟು ಅವರ ನಿರ್ಣಯದಂತೆ,ಅವರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಿದ್ದಾರೆ.ಎಂಎಲ್ಎ,ಎಂಪಿ ಅವಕಾಶ ಇತ್ತು.
ಕೃಷ್ಣೇಗೌಡ ನನ್ನ ಮನೆ ಬಾಗಿಲು ಕಾಯುತ್ತಿದ್ದ, ಕಾಲಿಗೆ ಬೀಳುತ್ತಿದ್ದ ನಾನು ಶೂ ಧರಿಸಿದ್ದರೂ ಕಾಲಿ ಬಿದ್ದು ಯುವ ಘಟಕ ಮಾಡಿಕೊಡಿ ಎಂದು ಬೇಡುತ್ತಿದ್ದ
ಆತ ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಬೇಕು.ಬಹಿರಂಗವಾಗಿ ಕ್ಷಮೆ ಕೇಳಬೇಕು
ಇಲ್ಲ ಅಂದ್ರೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ.ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ.ಈ ಕೆಟ್ಟ ಉಳಕ್ಕೆ ಅವಕಾಶ ಮಾಡಿಕೊಡವುದಕ್ಕೆ ಆಗುತ್ತ.ಅದಕ್ಕಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿತ್ತಿದ್ದಾನೆ ಎಂದು ಹೇಳಿದರು.