ಚಾಮರಾಜನಗರ : ಮನೆ ಮುಂದೆ ನಿಂತಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿರುವ ಘಟನೆ
ಚಾಮರಾಜನಗರದ ಮುಬಾರಕ್ ಮೊಹಲ್ಲಾದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ಗಳತ್ತ ಜನರು ವಾಲುತ್ತಿದ್ದು ಅದೇ ರೀತಿ, ಕೆಲವೆಡೆ ಇ-ಸ್ಕೂಟರ್ ಗಳಿಂದ ಅಗ್ನಿ ಅವಘಡ ಹೆಚ್ಚಾಗುತ್ತಿದೆ. ಅದೇ ರೀತಿ ತಡರಾತ್ರಿ ಅಸಾದುಲ್ಲಾ ಎಂಬುವರ ಇ-ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿ
ನೋಡ ನೋಡುತ್ತಿದ್ದಂತೆ ವ್ಯಾಪಿಸಿ ಬೈಕ್ ಉರಿದಿದೆ.
ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿ ಹೆಚ್ಚಿನ ಅನಾಹು ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪಟ್ಟಣ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.