ಮಂಡ್ಯ : ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಇರುವುದಿಲ್ಲ, ಮೇ ಬಳಿಕ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ
ಕೆ.ಆರ್.ಪೇಟೆಯ ಬೆಳತೂರು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಜನರ ಧ್ವನಿಯಾಗಿ ಇರುತ್ತೇನೆ. ಈ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಇರುವುದಿಲ್ಲ. ಮೇ ತಿಂಗಳ ಬಳಿಕ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕೆ.ಆರ್.ಪೇಟೆಯ ಶಾಸಕ ಗೆದ್ದಮೇಲೆ ಕೆಲಸ ಮಾಡಲಿಲ್ಲ ಎಂದುಕೊಳ್ಳಬೇಡಿ. ನೀವು ಅವರನ್ನು ಒಳ್ಳೆಯವರು ಎಂದು ಗೆಲ್ಲಿಸಿದ್ದೀರಾ. ನೀವು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಮಂಜಣ್ಣ ಕೂಡ ಇಟ್ಟುಕೊಂಡಿದ್ದಾರೆ. ನಿಮ್ಮ ಕೆಲಸಗಳನ್ನು ಶಾಸಕರ ಜೊತೆ ನಿಂತು ಮಾಡಿಸುವ ಹೊಣೆ ನನ್ನ ಮೇಲಿದೆ. ಶಾಸಕರಿಗೆ ಐದಾರು ತಿಂಗಳು ಸಮಯ ಕೊಡಿ ಎಂದು ಹೇಳಿದ್ದಾರೆ
ಜೆಡಿಎಸ್ (JDS) ಶಾಸಕ ಮಂಜು ಅವರು ಮಾತನಾಡಿ, ನಮ್ಮ ತಾಲೂಕು ಅಭಿವೃದ್ಧಿ ಆಗಬೇಕಾದರೆ ಕುಮಾರಣ್ಣಗೆ ಅವಕಾಶ ಸಿಗಬೇಕು. ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದಿನ ಶಾಸಕರು ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ವರ್ಷಗಳ ಕಾಲ ಅನುದಾನವನ್ನು ಗುದ್ದಲಿಪೂಜೆ ಮಾಡಿಕೊಂಡೇ ಕಳೆದಿದ್ದಾರೆ. ಮತ್ತೆ ಹೆಚ್‍ಡಿಕೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಹಿಂದೆ ಪಂಚರತ್ನ ಯೋಜನೆ ಜಾರಿಗೆ ಅವಕಾಶ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರಿಗೆ ಅವಕಾಶ ಸಿಗಲಿದೆ ಎಂದಿದ್ದಾರೆ