ಮೈಸೂರು : ಸ್ವ ಪಕ್ಷದ ಸಚಿವರ ವಿರುದ್ದ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಇದರಿಂದ ಸರ್ಕಾರ ಸೆಲ್ಪ ಸೂಸೈಡ್ ಅಗುತ್ತಾ ?
ಅಪಘಾತ ಅಥವಾ ಹಿಟ್ ವಿಕೆಟ್ ಆಗಬಹುದು ಕಾದು ನೋಡಿ ಇದು ಕೇವಲ ಬಿ ಆರ್ ಪಾಟೀಲ್ ಅವರ ಸಮಸ್ಯೆಯಲ್ಲ. ಇಡೀ ವ್ಯವಸ್ಥೆಯ ಸಮಸ್ಯೆಯಾಗಿದೆ
ಇದರಿಂದ ಸರ್ಕಾರಕ್ಕೆ ಕಂಟಕವಾಗುತ್ತದಾ ಅನ್ನೋದನ್ನು ಕಾದು ನೋಡಿ ಇದರಿಂದ ಸರ್ಕಾರಕ್ಕೆ ಏನಾಗುತ್ತದೆ ಅಂತಾ ಹೇಳಲು ನಾನು ಜ್ಯೋತಿಷಿ ಅಲ್ಲ. ಹಿರಿಯ ಶಾಸಕರು ಅವರ ಪಕ್ಷದ ಮಂತ್ರಿಗಳ ಮನನೊಂದು ಪತ್ರ ಬರೆದಿದ್ದಾರೆ
ಇದು ಒಳ್ಳೆಯ ಬೆಳವಣಿಗೆಯಲ್ಲ ಆಡಳಿತದ ಶಾಸಕರ ಪರಿಸ್ಥಿತಿ ಹೀಗಾದರೆ ಜನರ ಪರಿಸ್ಥಿತಿ ಏನಾಗಬಹುದು ಎಂದರು.
ಅಭಿವೃದ್ಧಿ ಕೆಲಸಗಳನ್ನು ಅಕ್ರಮ ಅನ್ನೋ ಅನುಮಾನದಲ್ಲಿ ನೋಡುವುದು ಸರ್ವೇ ಸಾಮಾನ್ಯವಾಗಿದೆ
ಬಿಆರ್ ಪಾಟೀಲ್ ತನಿಖೆ ಮಾಡಲು ಒತ್ತಾಯ ಮಾಡಿದ್ದಾರೆ. ಸದನಕ್ಕೆ ಬರಲ್ಲ ಅಂತಾ ಹೇಳಿರುವುದು ಒಳ್ಳೆಯ ಬೆಳವಣಿಗೆಯಲ್ಲಈ ಸರ್ಕಾರದಲ್ಲಿ ಶಾಸಕರಿಗೆ ಎಷ್ಟು ಬೆಲೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತದೆ
ಇದು ನಿರಂತರವಾಗಿ ನಡೆಯುತ್ತಿದೆ. ಪದೇ ಪದೇ ಈ ರೀತಿ ಬೆಳವಣಿಗೆಯಿಂದ ಆಡಳಿತ ಪಕ್ಷ ಮುಂದೆ ಏನಾಗುತ್ತದೆ ಅನ್ನೋ ಚರ್ಚೆ ಆರಂಭವಾಗುತ್ತಿದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು