ಮೈಸೂರು : ಸರ್ಕಾರ ಸಿಬಿಐ ತನಿಖೆ ವಾಪಸ್ಸು ಪಡೆದಿರುವ ಹಿನ್ನೆಲೆ ಶಾಸಕ ಯತ್ನಾಳ್ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ಯತ್ನಾಳ್ ಒಬ್ಬ ಜವಾಬ್ದಾರಿಯುತ ಶಾಸಕಸರ್ಕಾರಿ ದಾರಿತಪ್ಪಿ ತೆಗೆದುಕೊಂಡ ನಿರ್ಣಯವನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದರು.
ಕಾನೂನು ಬಾಹಿರ ಚಟುವಟಿಕೆ ಮಾಡಿ ಅದರಿಂದ ರಕ್ಷಣೆ ಪಡೆಯುವುದರಲ್ಲಿ ಡಿ ಕೆ ಶಿವಕುಮಾರ್ ಎಕ್ಸಪರ್ಟ್ ಇದ್ದಾರೆ. ಅವರು ಅನುಭವಸ್ಥರಿದ್ದರೆ
ಸಂವಿಧಾನದ ಬಗ್ಗೆ ಗೌರವ ಇದ್ದಿದ್ದರೆ ಈ ತೀರ್ಮಾನ ಮಾಡುತ್ತಿರಲಿಲ್ಲದೇಶದ ಸಂವಿಧಾನದ ಸಂಸ್ಥೆಗಳನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ವಿಚಾರದಲ್ಲಿ ಸರ್ಕಾರ ಸಹಾ ದಾರಿ ತಪ್ಪಿದೆ. ಕಾನೂನು ತಜ್ಞರ ಅಭಿಪ್ರಾಯ ಸಹಾ ಇದೆ ಆಗಿದೆ. ಇವರ ನಡವಳಿಕೆಗಳಲ್ಲಿ ಪರಿಶುದ್ಧತೆ ಪ್ರಾಮಾಣಿಕತೆ ಇದ್ದಿದ್ದರೆ ತನಿಖೆಗೆ ಒಪ್ಪಬೇಕಿತ್ತು
ಆದರೆ ಅದು ಅವರಲ್ಲಿ ಇಲ್ಲ.
ತನಿಖೆಗೆ ಕಾನೂನು ಸಮ್ಮತವಾಗಿಯೇ ನೀಡಲಾಗಿದೆ
ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ
ಆರ್ ಟಿ ಐ ಕಾರ್ಯಕರ್ತ ದೂರು ನೀಡಿ ಅನುಮತಿ ಕೋರಿದ ಉದಾಹರಣೆ ನೀಡಿದ ಹೆಚ್ ಡಿ ಕೆ
ಸಿಎಂ ಸಿದ್ದರಾಮಯ್ಯ ವಿರುದ್ದವೂ ವಾಗ್ದಾಳಿ
ಸಿಎಂ ಒಬ್ಬ ವಕೀಲರಾಗಿ, ಕಾನೂನು ಉಪನ್ಯಾಸಕರಾಗಿ ಅವರಿಂದ ಈ ತೀರ್ಮಾನ ಬಂದಿರುವುದು ಅವರ ನಿಲುವು ಬಟ್ಟಬಯಲಾಗಿದೆ. ಕಾನೂನು ಬಾಹಿರ ಚಟುವಟಿಕೆಗೆ ರಕ್ಷಣೆ ಕೊಡಲು ಈ ತೀರ್ಮಾನ ಮಾಡಿದ್ದಾರೆ
ಇದರಲ್ಲಿ ಯಾವುದೇ ಸಂಶಯವಿಲ್ಲ
ಈ ಮೂಲಕ ಸಿದ್ದರಾಮಯ್ಯ ಡಿಕೆಶಿ ಕಾಲಿನ ಕೆಳಗೆ ಇದ್ದೇವೆ ಅಂತಾ ಪ್ರದರ್ಶನ ಮಾಡಿದ್ದಾರೆ
ಯಾವ ಯಾವ ತಪ್ಪು ಮಾಡಿದರೆ ಅದನ್ನು ಸರಿ ಮಾಡಿಕೊಳ್ಳುವುದು ಅವರಿಗೆ ಗೊತ್ತಿದೆ ಎಂದು
ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.