ಮೈಸೂರು : ನನಗೆ ಅಧಿಕಾರ ಇದ್ದರೆ ನಾನು ವಿ.ಸೋಮಣ್ಣಗೆ ಲೋಕಸಭಾ ಟಿಕೇಟ್ ಕೊಡುತ್ತಿದೆ ಎಂದು
ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ವಿ.ಸೋಮಣ್ಣ ಮತ್ತು ನಾನು ಹುಣಸೂರಿನಿಂದ ಬರುತ್ತೆ ಹೈವೆಯಲ್ಲಿ ಭೇಟಿ ಆಗಿದ್ದೆವು.ಹೊಟೆಲ್ ಹಳ್ಳಿಮನೆಯಲ್ಲಿ ತಿಂಡಿ ತಿನ್ನುವಾಗ ಮಾತುಕತೆ ಮಾಡಿದ್ದೇವೆ. ಇಬ್ಬರೂ ಭೇಟಿಯಾದಾಗ ಮಾತನಾಡದೇ ಇರೋಕೆ ಆಗುತ್ತ, ಮಾತನಾಡಿದ್ದೇವೆ. ನಾನು ಲೋಕಸಭೆ ಟಿಕೆಟ್ ಕೊಡುವುದಾದರೆ ಸೋಮಣ್ಣಗೆ ಕೊಡುತ್ತೇನೆ.
ಅದು ನನ್ನೊಬ್ಬನ ತೀರ್ಮಾನ ಅಲ್ಲ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಸಚಿವ ಡಾ.ಮಹದೇವಪ್ಪ ತಿಳಿಸಿದರು.