ರಾಮನಗರ : ಡಿಸಿಎಂ ಎಂತಹಾ ದೊಡ್ಡತನ ತೋರಿಸಿದ್ದಾರೆ ಅಂದ್ರೆ.ಈ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತೆ ಅಂತ.ಪಾಪ ನಿನ್ನೆ ದಿನ ಡಿಸಿಎಂ ಸಂಪುಟ ಸಭೆಗೂ ಹೋಗಿಲ್ಲ. ಇವರ ಸಹಕಾರಕ್ಕೆ ಅಭಿನಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಳೆದ 3 ದಿನಗಳ ಹಿಂದೆ ಸೀನಿಯರ್ ಅಡ್ವಕೇಟ್ ಗಳ ಕರೆದು ಸಭೆಮಾಡಿ ಇದರಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಅಂತ ಚರ್ಚೆ ಮಾಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಇದೆ, ಮೊನ್ನೆಯೇ ಈ ವಿಚಾರ ಗಮನಕ್ಕೆ ಬಂತು.
ಸರ್ಕಾರದ ನಿನ್ನೆಯ ತೀರ್ಮಾನ, ಈ ನಡವಳಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ.
ಈ ವಿಚಾರಗಳನ್ನ ಮುಂದಿನ ಸದನದಲ್ಲಿ ಚರ್ಚೆ ಮಾಡೋಣ ಎಂದರು
ಸರ್ಕಾರಕ್ಕೆ ಡಿಕೆಶಿ ಒತ್ತಡ ಹಾಕಿದ್ರಾ ಎಂಬ ವಿಚಾರ
ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ, ಸರ್ಕಾರ ಇರೋದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡೋದಕ್ಕೆ.
ತಿಳುವಳಿಕೆ ಇರುವವರೇ ಇಂತ ನಿರ್ಣಯ ಮಾಡಿರೋದು ಸರ್ಕಾರಕ್ಕೆ ಛೀಮಾರಿ ಹಾಕಿದಂತೆ.
ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಆಗಲ್ಲ. ಸಿಬಿಐಬಿಂದ ವಾಪಸ್ಸ್ ತಗೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತಾ.?ಲೋಕಾಯುಕ್ತ ಅಥವಾ ಪೊಲೀಸರು ಇದನ್ನ ಮಾಡಲು ಸಾಧ್ಯವೇ.?
ಹಿಂದಿನ ಸರ್ಕಾರ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ.ಇವರು ಸ್ಪೀಕರ್ ನಿಂದ ಅನುಮತಿ ಪಡೆದಿದ್ದಾರಾ.?ಇದೆಲ್ಲಾ ಕೇವಲ ಸಬೂಬುಗಳು ಎಂದು ಹೇಳಿದರು.
ಈಗಾಗಲೇ ತನಿಖೆ ಮುಂದುವರಿಸಿ ಅಂತ ಕೋರ್ಟ್ ಆದೇಶ ಆಗಿದೆ.ಈಗ ಸ್ಪೀಕರ್ ಅನುಮತಿ ಪಡೆದ್ರೂ ವಾಪಸ್ಸ್ ಪಡೆಯಲು ಆಗುತ್ತಾ.?
ನಿನ್ನೆ ಕ್ಯಾಬಿನೆಟ್ ನಲ್ಲಿ ಏನು ತೀರ್ಮಾನ ಆಗಿದೆಇದೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ರದ್ದು ಮಾಡಿ, ಅಕ್ರಮ ಮುಚ್ಚಿಹಾಕಿದ್ರು.ಇದರಲ್ಲಿ ಸಿದ್ದರಾಮಯ್ಯ ನಿಪುಣರು.ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಹಾಕಲು ಹೊರಟಿದ್ದಾರೆ ಎಂದರು.
ಜಾತಿಗಣತಿ ಕುರಿತು ಕಾಂತರಾಜು ವರದಿ ವಿಚಾರ.
ಸರ್ಕಾರ ಇನ್ನೂ ನಾಲ್ಕು ತಿಂಗಳು ಇದನ್ನ ಸ್ಟಡಿ ಮಾಡ್ತೀವಿ ಅಂದಿದ್ದಾರೆ.ಇದು ಪಾರ್ಲಿಮೆಂಟ್ ಚುನಾವಣೆ ವರೆಗೆ ಏನೂ ಆಗಲ್ಲ.ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ.ಇವರ ಕೈಯಲ್ಲಿ ಏನೂ ಆಗಲ್ಲ.
ಇದೇ ಸಿದ್ದರಾಮಯ್ಯ 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಹೆಚ್ಡಿಕೆ ಸ್ವೀಕರಿಸಿಲ್ಲ ಎಂದಿದ್ರು.
ಹಾಗಿದ್ರೆ ಆಗಲೇ ವರದಿ ಸಿದ್ದವಾಗಿತ್ತಲ್ವಾ.?
ಸರ್ಕಾರ ಬಂದು 6ತಿಂಗಳಾಗಿದೆ, ಇನ್ನೂ ಯಾಕೆ ವರದಿ ಸ್ವೀಕಾರ ಮಾಡಿಲ್ಲ ಮುಂದೆ ಚರ್ಚೆ ಮಾಡೋಣ ಬಿಡಿ ಎಂದರು
ಎಸಿ ಕೋರ್ಟ್ ವರ್ಗಾವಣೆ ವಿಚಾರ
ಎಸಿ ಕೋರ್ಟ್ ಕನಕಪುರಕ್ಕೆ ವರ್ಗಾವಣೆ ವಿಚಾರ.
ವರ್ಗಾವಣೆ ಖಂಡಿಸಿ ವಕೀಲರ ಪ್ರತಿಭಟನೆ ಹಿನ್ನೆಲೆ.
ವಕೀಲರ ಸಮಸ್ಯೆ ಆಲಿಸಲು ಬಂದ ಮಾಜಿ ಸಿಎಂ ಹೆಚ್ಡಿಕೆ.
ರಾಮನಗರದ ಕೋರ್ಟ್ ಆವರಣದಲ್ಲಿ ವಕೀಲರ ಜೊತೆ ಮಾತುಕತೆ.ವಕೀಲರ ಸಮಸ್ಯೆ ಆಲಿಸಿದ ಹೆಚ್.ಡಿ.ಕುಮಾರಸ್ವಾಮಿ.
ರಾಮನಗರ ಎಸಿ ಕೋರ್ಟ್ ಸ್ಥಳಾಂತರ ಖಂಡಿಸಿ ನನ್ನೆ ಪ್ರತಿಭಟನೆ ನಡೆಸಿದ್ದ ವಕೀಲರು.
ವಾರದಲ್ಲಿ ಒಂದು ದಿನ ಕನಕಪುರದಲ್ಲಿ ಕೋರ್ಟ್ ಕಲಾಪ ನಡೆಸಲು ನಿರ್ಧರಿಸಿರುವ ಎಸಿ.
ಕನಕಪುರ ವ್ಯಾಪ್ತಿಯ ಎಸಿ ಕೋರ್ಟ್ ಕಲಾಪಗಳನ್ನ ಕನಕಪುರದಲ್ಲೇ ನಡೆಸಲು ತೀರ್ಮಾನ.
ಈ ಹಿಂದೆ ರಾಮನಗರದಲ್ಲೇ ನಡೆಯುತ್ತಿದ್ದ ಎಸಿ ಕೋರ್ಟ್.
ಇದೀಗ ದಿಢೀರ್ ಬದಲಾವಣೆಗೆ ವಕೀಲರ ಕಿಡಿ, ಪ್ರತಿಭಟನೆ..
ಇದು ಚೈಲ್ಡ್ ಇಶ್ಯೂ.! ಎಸಿ ಕೋರ್ಟ ನ್ನ ವಾರದಲ್ಲಿ ಒಂದುದಿನ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ.
ಇದನ್ನ ಇಡೀ ರಾಜ್ಯದಲ್ಲಿ ಪ್ರತಿ ತಾಲೂಕಿನಲ್ಲೂ ಒಂದೊಂದು ಎಸಿ ಕೋರ್ಟ್ ಮಾಡಿ.
ಇದು ಸರ್ವಾಧಿಕಾರಿ ಧೋರಣೆಯೋ, ಅಂತಹ ತರಾತುರಿ ಏನು.?
ಎಲ್ಲಾ ಪೋಡಿ ಮಾಡಿಸೋಕೆ, ಲೂಟಿ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ.
ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸ.
ಉಪವಿಭಾಗಧಿಕಾರಿ ನ್ಯಾಯಾಲಯವನ್ನ ಒಂದು ತಾಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಿದ್ದಾರೆ. ಇಂತಹ ತೀರ್ಮಾನ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಇಲ್ಲ.
ಈ ರೀತಿಯ ತೀರ್ಮಾನ ಎಲ್ಲರಿಗೂ ಅಚ್ಚರಿ ತಂದಿದೆ. ಈ ನಿರ್ಣಯದ ಬಗ್ಗೆ ವಕೀಲರು ಪ್ರತಿಭಟನೆ ಮಾಡಿದ್ದಾರೆ.
ಅವೈಜ್ಞಾನಿಕ ನಿರ್ಧಾರ ಸರಿಯಲ್ಲ. ಇದು ಸರ್ಕಾರದ ಆದೇಶವೋ, ಡಿಸಿ ಆದೇಶವೋ ಅಥವಾ ಎಸಿಯವರ ಸ್ವಂತ ತೀರ್ಮಾನವೋ.?
ಹಾಗೆ ಮಾಡೋದಿದ್ರೆ ನಮ್ಮ ತಾಲೂಕಿನಲ್ಲೂ ಬಂದು ಎಸಿ ಕೋರ್ಟ್ ನಡೆಸಿ.
ಇದು ತುಘಲಕ್ ಸಂಸ್ಕೃತಿ.
ಈ ರೀತಿಯ ತೀರ್ಮಾನ ಮಾಡಲು ಅವಕಾಶ ಇಲ್ಲ. ಮಾಡಿದ್ರೆ ಇಡೀ ರಾಜ್ಯಕ್ಕೆ ಅನ್ವಯ ಆಗುವ ಹಾಗೆ ಮಾಡಿ. ಕೇವಲ ಕನಕಪುರಕ್ಕೆ ಮಾತ್ರ ಏಕೆ. ಜಿಲ್ಲಾ ಕೇಂದ್ರದಿಂದ ಎಸಿ ಕೋರ್ಟ್ ನ್ನು ತಾಲೂಕಿಗೆ ಸ್ಥಳಾಂತರ ಮಾಡೋದು ಎಷ್ಟು ಸರಿ.?
ನಿಮ್ಮ ಪರವಾಗಿ ನಾನು ಸದನದಲ್ಲಿ ಪ್ರಸ್ತಾಪ ಮಾಡ್ತೀನಿ.
ಸರ್ಕಾರದ ಹುಡುಗಾಟಿಕೆಯ ನಿರ್ಧಾರದ ಬಗ್ಗೆ ಧ್ವನಿ ಎತ್ತಬೇಕು.
ಸಮಸ್ಯೆಗಳನ್ನ ಇವರೇ ಉದ್ಭವ ಮಾಡ್ತಾರೆ.
ನಾನು ನಿಮ್ಮ ಜೊತೆ ಇರ್ತೇನೆ, ಸದನದಲ್ಲಿ ಇದನ್ನ ಚರ್ಚೆ ಮಾಡ್ತೇನೆ.
ರಾಮನಗರದ ವಕೀಲರ ಭವನದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೇಳಿದರು
ಚನ್ನಪಟ್ಟಣದಲ್ಲಿ ಅನ್ನಭಾಗ್ಯದ ಅಕ್ಕಿ ಕಳವು ವಿಚಾರ
ಈ ಬಗ್ಗೆ ಆ್ಯಕ್ಚನ್ ತೆಗೆದುಕೊಳ್ಳಲ್ಲಿ.
ಇದು ಕೇವಲ ಚನ್ನಪಟ್ಟಣದಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ನಡೆಯುತ್ತಿದೆ.
ಸರ್ಕಾರ ಜವಾಬ್ದಾರಿಯಿಂದ ಕ್ರಮವಹಿಸಲಿ.
ರಾಮನಗರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೇಳಿದರು