ಮೈಸೂರು : ಚಾಮರಾಜ ನಗರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ವಿಚಾರಕ್ಕೆ ಸಚಿವ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ನಾನು ಯೋಚನೆ ಮಾಡಿಲ್ಲ ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡುತ್ತೇನೆ.ನಾನು ಆಕಾಂಕ್ಷಿ ಏನಾಲ್ಲ ಚಾಮರಾಜ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಸುನೀಲ್ ಬೋಸ್ ಕೂಡ ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡ್ತಾರೆ.ಪಕ್ಷಕ್ಕೆ ಕೆಲ್ಸ ಮಾಡಿದವರು ಸ್ಪರ್ಧೆ ಮಾಡ್ಬೇಕು.ಸುನೀಲ್ ಬೋಸ್ ನನ್ನ ಮಗ ಅಂತ ಹೇಳ್ತಿಲ್ಲ ಕೆಲ್ಸ ಮಾಡಿದ್ದಾರೆ.ಪಕ್ಷ ಆಯ್ಕೆ ಮಾಡಿದ್ರೆ ಸುನೀಲ್ ಬೋಸ್ ಆಕಾಂಕ್ಷಿ.ಸೋಮಣ್ಣ ಕಾಂಗ್ರೆಸ್ಸ್ ಪಕ್ಷ ಸೇರ್ಪಡೆ ವಿಚಾರಕಾಂಗ್ರೆಸ್ ಪಕ್ಷಕ್ಕೆ ಅವ್ರಗಿದ್ದು ಬಂದ್ರೆ ಬೇಡ ಅಂತ ಹೇಳೋದಿಲ್ಲ ಸಿದ್ದಾಂತ ಒಪ್ಪಿಕೊಂಡು ಬಂದ್ರೆ ಬರಲಿ ಬೇಡ ಅನ್ನೋದಿಲ್ಲ.ಸೋಮಣ್ಣ ಅವ್ರು ಜೊತೆ ಯಾವುದೇ ಸಂಪರ್ಕ ಇಲ್ಲ.ಅವ್ರು ನಮ್ಮನ್ನ ಸಂಪರ್ಕ ಮಾಡಿಲ್ಲ.
ಪಕ್ಷ ತೀರ್ಮಾನ ಮಾಡಿದ್ರೆ ಬರಲಿ.ನೆನ್ನೆ ತಾನೇ ಬೇಟಿ ಆಗಿದ್ವಿ ಪಕ್ಷ ಸೇರ್ಪಡೆ ವಿಚಾರ ಬಗ್ಗೆ ಮಾತುಕತೆ ಆಗಿಲ್ಲ.
ಪಕ್ಷಕ್ಕೆ ಯಾರು ಒಪ್ಪಿಕೊಂಡು ಬರ್ತರೋ ಅವರನ್ನ ಸಿದ್ದಾಂತ ಮೆರೆಗೆ ಸೇರಿಸಿಕೊಳ್ಳುತ್ತೇವೆ ಎಂದು ಸಚಿವ
ಹೆಚ್.ಸಿ ಮಹದೇವಪ್ಪ ಹೇಳಿದರು.