ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪವಾಡ ಪುರುಷ ಮಲೆಮಹದೇಶ್ವರ ನೆಲೆಸಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಬೆಳಗ್ಗೆ 8:00 ಗಂಟೆ 50 ನಿಮಿಷ ದಿಂದ 9:15 ನಿಮಿಷದವರೆಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ನಡೆಯಿತು
ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ದರ್ಶಿ ಸರಸ್ವತಿ ರವರ ನೇತೃತ್ವದಲ್ಲಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ತಮಿಳುನಾಡು ಸೇರಿದಂತೆ ದೇಶದ ವಿವಿಧ ಮೂಲಗಳಿಂದ ನಂತರ ಭಕ್ತರು ಮಲೆಮಾದೇಶ್ವರ ಬೆಟ್ಟಕ್ಕೆ ಬಂದು ಪವಾಡಪುರುಷ ಮಹದೇಶ್ವರ ದರ್ಶನ ಪಡೆದರು.
ದೀಪಾವಳಿ ಜಾತ್ರೆ ಅಂಗವಾಗಿ ಶ್ರೀ ಮಲೆ ಮಹದೇಶ್ವರ ಗರ್ಭಗುಡಿಯನ್ನು ವಿವಿಧ ಹೂಗಳಿಂದ ಆಕರ್ಷಿತವಾಗಿ ಅಲಂಕಾರ ಮಾಡಲಾಗಿತ್ತು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.