ಮೈಸೂರು : ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದುರುಪಯೋಗ ಪಡಿಸಿಕೊಂಡು
ದಂಧೆಕೋರರಿಂದ ಮನೆ ಮನೆಗೆ ತೆರಳಿ ಅನ್ನಭಾಗ್ಯ ಅಕ್ಕಿಯನ್ನು ಖರೀದಿ ಮಾಡುತ್ತಿದ್ದಾರೆ.
ಅಪ್ರಾಪ್ತರ ಯುವಕರು ಅನ್ನಭಾಗ್ಯ ಅಕ್ಕಿ ಖರೀದಿ ಮಾಡುತ್ತಿದ್ದು 15 ರಿಂದ 16 ರೂಪಾಯಿಗೆ ಒಂದು ಕೇಜಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ , ನಂತರ 50 ರಿಂದ 60 ರೂಪಾಯಿಗೆ ಮಾರಾಟ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮೈಸೂರಿನ ಎನ್ ಆರ್ ಮೊಹಲ್ಲಾ ಸೇರಿ ಹಲವು ಕಡೆ ದಂಧೆ ನಡೆಯುತ್ತಿದೆ ಅಲ್ಲದೆ ಇದುವರೆಗೂ ಹಲವು ವಾಹನ ಪೊಲೀಸರ ವಶಕ್ಕೆ ಪಡೆದರು ಈ ದಂಧೆ ನಿಲ್ಲುತ್ತಿಲ್ಲ.
ಆಟೋ ದ್ಚಿಚಕ್ರ ವಾಹನದಲ್ಲಿ ಮನೆ ಮನೆಗೆ ತೆರಳಿ ಅಕ್ಕಿ ಖರೀದಿಸುತ್ತಿರುವ ಮಕ್ಕಳುಅಕ್ಕಿ ಖರೀದಿಸಿ ದಂಧೆಕೋರರಿಗೆ ಅನ್ನಭಾಗ್ಯ ಅಕ್ಕಿ ಸರಬರಾಜು
ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ದಂಧೆಕೋರರು
ಎರಡು ತಿಂಗಳ ಹಿಂದೆ ಸಹಾ ಆಟೋದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಣೆಅಪ್ರಾಪ್ತರಿಂದ ಆಟೋದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಣೆ ವಿಡಿಯೋ ವೈರಲ್ ಆಗಿತ್ತು
ಮಕ್ಕಳ ಅನ್ನೋ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ, ಅಲ್ಲದೆ ಜನರು ಕೂಡ
ವಾರ್ನ್ ಮಾಡಿ ಕಳುಹಿಸಿದ್ದರು.