ಮೈಸೂರು : ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿಯಾಗಿ
ನಾಲ್ಕು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಳಲೆ ಬಲದಂಡೆ ನಾಲೆ ಬಳಿ ನಡೆದಿದೆ.
ವಾಹನ ಅಲ್ಲೇ ಬಿಟ್ಟು ಆಸಾಮಿಗಳು ಎಸ್ಕೇಪ್ ಆಗಿದ್ದಾರೆ.
(KA, 09, AA- 3185 ಬೋಲೆರೋ ವಾಹನ)
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆ ಹಸುಗಳು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ
ಒಂದು ಎಮ್ಮೆ ಸೇರಿ ನಾಲ್ಕು ಗೋವುಗಳು ಸಾವು
ಸತ್ತ ಜಾನುವಾರುಗಳ ಸಮೇತ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳಲೆ ಪಶು ವೈಧ್ಯಾಧಿಕಾರಿ ರಥಿಕುಮಾರಿಯವರಿಂದ ಜಾನುವಾರುಗಳ ಶವಪರೀಕ್ಷೆ ನಡೆಯಲಿದ್ದು,
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.