ಮೈಸೂರು : ಕನ್ನಡ ಭಾಷೆಗೆ ಔದಾರ್ಯವಿದೆ.
ಕನ್ನಡ ಎಲ್ಲರನ್ನೂ ಒಳಗೊಳ್ಳಬೇಕು ಎಂದು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಕನ್ನಡಕ್ಕೆ ತಾಳ್ಮೆ,ಸಂಯಮ ಇದೆ.ಭಾಷೆ ಗೊತ್ತಿರುವವರು, ಗೊತ್ತಿಲ್ಲದವರು ಎಂಬ ಭೇದವಿಲ್ಲ.ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯಬೇಕಿದೆ ಎಂದರು.ಮಹಾರಾಷ್ಟ್ರ ಗಡಿಯಲ್ಲಿ ಬಸ್‌ಗಳಿಗೆ ಬೆಂಕಿ ವಿಚಾರವಾಗಿ ಮಾತನಾಡಿ
ಕರ್ನಾಟಕದ ನೆಲದಲ್ಲಿ ಕನ್ನಡದ ಮೇಲೆ ದಬ್ಬಾಳಿಕೆ ಸರಿಯಲ್ಲ.ಇದಕ್ಕೆಲ್ಲ ಅವಕಾಶ ಇಲ್ಲ. ಅಂತವರ ಮೇಲೆ
ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು