ಚಾಮರಾಜನಗರ : ಮಹಾಲಯ ಅಮವಾಸೆ ಹಿನ್ನಲೆಯಲ್ಲಿ ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮವಾಸೆ ಜಾತ್ರೆ ಹಿನ್ನಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಶುಕ್ರವಾರ ರಾತ್ರಿ ಎಣ್ಣೆ ಮಜ್ಜನ ಸಂಭ್ರಮದಿಂದ ನಡೆಯಿತು.
ಮಹಿಳೆಯರಿಗೆ ಫ್ರೀ ಬಸ್ ಸೌಕರ್ಯ ಇರುವ ಹಿನ್ನಲೆಯಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ನಲ್ಲಿ ಮಹಿಳೆಯರೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದರು. ಮಹಾಲಯ ಅಮವಾಸೆ ಜಾತ್ರೆ ಹಿನ್ನಲೆಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ದೀಪಾಲಂಕಾರ ಜೊತೆಗೆ ಭಕ್ತರಿಗೆ ಸಕಲ ಸೌಕರ್ಯವನ್ನು ಒಗಿಸಲಾಗಿತ್ತು.
ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ರಿಯಾಲಟಿ ಚಕ್ ಗಾಗಿ ಭಕ್ತರ ನಡುವೆ ಸಂಚಾರ ಮಾಡಿದ್ದಲ್ಲದೆ, ಪ್ರಾಧಿಕಾರದಿಂದ ನೀಡಲಾಗುತ್ತಿರುವ ಸೌಕರ್ಯವನ್ನು ಖುದ್ದಾಗಿ ಪರಿಶೀಲಿಸಿದರು.