ಮೈಸೂರು : ಮೈಸೂರಿನಲ್ಲಿ ಮಹಾನಗರಪಾಲಿಕೆ ಸಿಬ್ಬಂದಿಗಳು ದಿಢೀರ್ ಕಾರ್ಯಾಚರಣೆ ನಡೆಸಿ
ಪ್ಲಾಸ್ಟಿಕ್ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ದಾಳಿ ಮಾಡಿದ್ದಾರೆ.
ಪಾಲಿಕೆಯ ಪರಿಸರ ಇಂಜಿನಿಯರ್ ಮೈತ್ರಿಯವರ ನೇತೃತ್ವದಲ್ಲಿ ನಡೆದಿರುವ ದಾಳಿ ನಡೆದಿದ್ದು
ಮೈಸೂರಿನ ಸಂತೇಪೇಟೆಯ ಗೋದಾಮಿನಲ್ಲಿ ಅಡಗಿಸಿಟ್ಟಿದ್ದ ಪ್ಲಾಸ್ಟಿಕ್ ಪದಾರ್ಥಗಳು ವಶಕ್ಕೆ ಪಡೆಯಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಪ್ಲಾಸ್ಟಿಕ್ ಪದಾರ್ಥಗಳನ್ನು ಮಹಾನಗರಪಾಲಿಕೆ ವಾಹನಕ್ಕೆ ತುಂಬಿದ ಸಿಬ್ಬಂದಿ.
ಈ ಹಿಂದೆಯೂ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದ ಮಹಾನಗರ ಪಾಲಿಕೆ ಸಿಬ್ಬಂದಿ.ಎಚ್ಚರಿಕೆಯನ್ನೂ ಲೆಕ್ಕಿಸದೇ ಅಕ್ರಮವಾಗಿ ಪ್ಲಾಸ್ಟಿಕ್ ಪದಾರ್ಥಗಳನ್ನು ಗೋದಾಮಿನಲ್ಲಿರಿಸಿ ಮಾರಾಟ ಮಾಡಲಾಗುತ್ತಿತ್ತು.
ಹೀಗಾಗಿ ಇಂದು ದಿಢೀರ್ ದಾಳಿ ನಡೆಸಿದ ಮಹಾನಗರಪಾಲಿಕೆ ಸಿಬ್ಬಂದಿ. ದಾಳಿ ನಡೆದ ಕೆಲ ಸಮಯದಲ್ಲೇ ಶಾಸಕ ಕೆ ಹರೀಶ್ ಗೌಡ ಕೂಡ ಸ್ಥಳಕ್ಕೆ ಆಗಮಸಿ ಪರಿಶೀಲನೆ ನಡೆಸಿದರು