ಮೈಸೂರು:ಮಹಿಷಾ ದಸರಾ ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ಅಪಮಾನ ಮಾಡ್ತಾರೆ. ಈ ಕಾರಣಕ್ಕೆ ನಾನು ಮಹಿಷಾ ದಸರಾ ವಿರೋಧ ಮಾಡ್ತಿನಿ.ಫೇಸ್ ಬುಕ್ ಲೈವ್ ನಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ.
ಬೆಟ್ಟಕ್ಕೆ ಬಂದು ಮಹಿಷಾ ಒಳ್ಳೆಯವನು ಅಂದಷ್ಟೆ ಹೇಳಿ ಹೋಗುವುದಿಲ್ಲ.ಚಾಮುಂಡಿಗೆ ರವಿಕೆ ಹಾಕೋನು ಗಂಡ್ಸು,ಸೀರೆ ಉಡಿಸೋನು ಗಂಡಸು ಅಂತ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಯಾರಾದ್ರು ಒಪ್ಪಿಕೊಳ್ತಿರಾ.
ಮಹಿಷಾನನ್ನ ಒಳ್ಳೆಯವನನ್ನಾಗಿ ಮಾಡಲು ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.
ಇಂತಹವರನ್ನ ತಡೆಯಲು ನಾನು ವಿರೋಧ ಮಾಡುತ್ತಿದ್ದೇನೆ ಎಂದರು.
ಚಾಮುಂಡೇಶ್ವರಿಗೆ ಹೋಗಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾಕ್ಕೆ ವಿರೋಧ ಮಾಡಬೇಕು.
ಇಲ್ಲದಿದ್ದರೆ ತಾಯಿ ಚಾಮುಂಡಿ ಮುಂದೆ ಬೇಡಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕು ಇರುವುದಿಲ್ಲ
ನನ್ನ ದಲಿತ ವಿರೋಧಿ ಅಂತ ಹೇಳ್ತಾರೆ.
ವಿಚಾರ ಇಲ್ಲದಾಗ ಈ ರೀತಿ ಉಗುಳುತ್ತಾರೆ.
ಮಹಿಷಾನ ಬಗ್ಗೆ ಯಾವುದೇ ದಾಖಲೆ ಇಲ್ಲ.
ಈಗ ದಲಿತ ಅಂತ ಬೋರ್ಡ್ ಹಾಕಿಕೊಂಡು ಓಡಾಡುತ್ತಿರೋರು ಯಾರು ಅಂತನು ಮೈಸೂರಿಗರಿಗೆ ಗೊತ್ತು. ಅಶೋಕ್ ಪುರಂನ ಪ್ರತಿಯೊಬ್ಬರ ಮನೆಯಲ್ಲಿರೋದು ಚಾಮುಂಡೇಶ್ವರಿ ಪೋಟೋ.
ಮಹಿಷಾನ ಪೋಟೋ ಅಲ್ಲ.
ದಲಿತರೆ ಚಾಮುಂಡಿ ಹಬ್ಬವನ್ನ ಜಾಸ್ತಿ ಮಾಡೋದು.
ಈಗ ರಾಜಕೀಯಕ್ಕೆ ದಲಿತ ವಿರೋದಿ ಅನ್ನುತ್ತಾರೆ.
ಮಹಿಷಾ ಯಾವಾಗ ದಲಿತನಾದ.
ಮಹಿಷಾ ಬೌದ್ಧ ಬಿಕ್ಕು ಆಗಿದ್ದ ಅಂತ ಹೇಳ್ತಾರೆ.
ತಾಯಿ ಚಾಮುಂಡಿ ಉಲ್ಲೇಕ ಬರೋದ ಕೃತ ಯುಗದಲ್ಲಿ
ಬುದ್ದ ಬಂದಿದ್ದು ಕಲಿಯುಗದಲ್ಲಿ.
ಅಶೋಕ ಇದ್ದಿದ್ದು ಕ್ರಿ.ಪೂ 3 ನೇ ಶತಮಾನದಲ್ಲಿ.
ಇವರ ಹೇಳುವ ವಿಚಾರ ಸಮಯಕ್ಕೆ ತಾಳ ಮೇಳ ಇಲ್ಲ.
ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು.
ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡ್ತಿದ್ದಾರೆ ಇದೆಲ್ಲ ವೈಯಕ್ತಿಕ ಲಾಭ ನಷ್ಟದಿಂದ ಆಗಿರೋದು.
ನಿಜವಾದ ದಲಿತ ವಿರೋಧಿಗಳು ನೀವುಗಳು.
ಲಲಿತ ನಾಯಕ್ ರಿಂದ ಉದ್ಘಾಟನೆ ಮಾಡಿಸಲು ಮುಂದಾದ್ರಿ.
ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ.
ನೀವು ಅಂಬೇಡ್ಕರ್ ವಾದಿಗಳು ಅಂತಿರಾ ಆದ್ರೆ ಅಂಬೇಡ್ಕರ್ ಪುತ್ಥಳಿಗೆ ಎಂಡ ಕುಡಿಸಿದ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ.
ಸುಮನೆ ನನ್ನ ದಲಿತ ವಿರೋಧಿ ಅಂತ ಹೇಳೋದು ಬೇಡ.
ಮೈಸೂರಿಗರತ್ತಿರ ಹೋರಾಟದ ಗುಣ ಇಲ್ಲ ಅಂತ ಅಂದುಕೊಳ್ಳಬೇಡಿ.ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿ ಮಹಿಷಾ ಪೋಟೋ ಇಟ್ಟುಕೊಳ್ಳೊಕೆ ಬಿಡ್ತಾರ.
ನಿಮ್ಮ ಮನೆಯಲ್ಲೆ ಬೇಕಾದರೆ ಮಹಿಷಾ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿ ಅಪಮಾನ ಮಾಡಬೇಕು ಅಂತನ ನೀವು ಅಲ್ಲಿ ಹೋಗೋದು.
ಕೆಲವರಿಗೆ ಅರ್ಥವಾಗಬೇಕು ಅಂತ ನಿಮ್ಮ ಭಾಷೆಯಲ್ಲಿ ಹೇಳಿರೋದು.ಇಂತಹವರನ್ನ ವಿರೋಧಿಸದ್ದರೆ ಮುಂದೆ ಇಸ್ರೆಲ್ ಪರಿಸ್ಥಿತಿ ನಿರ್ಮಾಣ ವಾಗುತ್ತೆ ಎಂದು ವಾಗ್ದಾಳಿ ನಡೆಸಿದರು