ಮೈಸೂರು : ಪುರುಷೋತ್ತಮ್ ಒಬ್ಬ ಡೋಂಗಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹಗೆ ಪುರುಷೋತ್ತಮ್ ತಿರುಗೇಟು ಕೊಟ್ಟಿದ್ದಾರೆ.
ನಾನು ಚುನಾವಣೆಗಾಗಿ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿಲ್ಲ.ನಾನು ಮೈಸೂರಿನ ಬಹುಸಂಖ್ಯಾತರಿರುವ ಅಶೋಕಪುರಂ ನಲ್ಲಿ ಹುಟ್ಟುರುವವನು ನಾನು.
ಪ್ರತಾಪ್ ಸಿಂಹನ ವಿರುದ್ಧ ಚುನಾವಣೆಗೆ ನಿಂತರೂ ನಾನು ಠೇವಣಿ ಕಳೆದುಕೊಳ್ಳುವುದಿಲ್ಲ.ಅಶೋಕ್ ಪುರಂ ಜನರಲ್ಲಿ ಒಬ್ಬ ಸಣ್ಣ ಬಾಲಕನೂ ನನ್ನ ಎದುರು ಮಾತನಾಡುವುದಿಲ್ಲ.ಅಂತ ಗೌರವವನ್ನು ನಾವು ಕಾಪಾಡಿಕೊಂಡು ಬಂದಿದ್ದೇನೆ.
ನಾನು ಯಾವಾಗಲೂ ಸಾಮಾಜಿಕ,ಧಾರ್ಮಿಕ ವಿಚಾರಗಳಿಗೆ ಗೌರವ ಕೊಡುವವನು.
ನಾನು ಅಂದು ಮೇಯರ್ ಆಗಿದ್ದಾಗ ಪುಷ್ಪಾರ್ಚನೆ ಮಾಡಿದ್ದೇನೆ ಅದು ಯಾರಿಗೂ ನಿನ್ನಿಂದ ಅಗೌರವ ಆಗಬಾರದು ಎಂದು ಪುಷ್ಪಾರ್ಚನೆ ಮಾಡಿದ್ದೆ.
ನಾನು ಎಲ್ಲಾ ಆಚರಣೆಗಳಿಗೂ ಗೌರವ ಕೊಡುತ್ತೇನೆ.
ನನ್ನ ವಯಕ್ತಿಕ ಆಚರಣೆ ಅದು ನಮಗೆ ಬಿಟ್ಟದ್ದು.
ಪ್ರತಾಪ್ ಸಿಂಹನನ್ನು ಮೊದಲು ಬಿಜೆಪಿಯಿಂದ ವಜಾ ಮಾಡಬೇಕು ಎಂದರು.
ಸಂಸತ್ ಸ್ಥಾನದಿಂದ ವಜಾ ಮಾಡಬೇಕು.
ಅವನಿಂದ ಬಿಜೆಪಿಗೆ ಕೆಟ್ಟ ಸಂದೇಶ ಹೋಗುತ್ತದೆ.
ರಾಜ್ಯ ಮತ್ತು ದೇಶಕ್ಕೆ ಕೆಟ್ಟ ಸಂದೇಶ ಹೋಗುತ್ತದೆ.
ಬಿಜೆಪಿಯಲ್ಲೂ ನಮ್ಮ ಸಮುದಾಯದ ಜನ ಇದ್ದಾರೆ.
ಬಿಜೆಪಿಗೆ ನಮ್ಮ ಮತ ಬೇಕಾಗೊಲ್ವಾ.?
ಮೈಸೂರಿನಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು