ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ದಿಂಬಂ ಘಾಟ್ ನಲ್ಲಿ ಕಾಡಾನೆಯೊಂದು ಏಕಾಏಕಿ ಸರ್ಕಾರಿ ಬಸ್ ತಡೆದ ಪರಿಣಾಮ ಕೋಲಾಹಲ ಉಂಟಾಗಿತ್ತು.
ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿನ ದಿಂಬಂ ಘಾಟ್ ನಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ತಮಿಳುನಾಡು ಸರ್ಕಾರಿ ಬಸ್ ಗೆ ಎದುರಾಗಿ ಬಂದ ಕಾಡಾನೆಯೊಂದು ಬಸ್ ನ್ನು ಹಿಮ್ಮೆಟ್ಟಿಸಿದ ಘಟನೆ ನಡೆದಿದ್ದು, ಇದರಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಭಯಭೀತರಾಗಿದ್ದರು.
ಕೊಯಮತ್ತೂರಿನಿಂದ 20ಕ್ಕೂ ಹೆಚ್ಚು ಪ್ರಯಾಣಿಕರದ್ದ ತಮಿಳುನಾಡು ಸರ್ಕಾರಿ ಬಸ್ ದಿಂಬಂ ಘಾಟ್ ಮೂಲಕ ತಾಳವಾಡಿ ಕಡೆಗೆ ಬರುತ್ತಿತ್ತು. ದಿಂಬಂ ರಸ್ತೆಯಲ್ಲಿ ಬರುತ್ತಿದ್ದಾಗ ರಸ್ತೆಯಲ್ಲೇ ಬೀಡು ಬಿಟ್ಟಿದ್ದ ಏಕಾಏಕಿ ಕಾಡಾನೆ ಸರ್ಕಾರಿ ಬಸ್‌ಗೆ ಅಡ್ಡಿಪಡಿಸಿತು. ಮತ್ತು ಸರ್ಕಾರ ಬಸ್ಸಿನ ಕಡೆಗೆ ಧಾವಿಸಿತು. ಬಸ್ ಚಾಲಕ ಚಾಕಚಕ್ಯತೆಯಿಂದ ಬಸ್ಸನ್ನು ಬಹಳ ದೂರದವರೆಗೆ ಹಿಂದಕ್ಕೆ ಓಡಿಸಿದ. ಕಾಡಾನೆಯೊಂದು ಸರ್ಕಾರಿ ಬಸ್ ಅನ್ನು ಹಿಂದಿಕ್ಕಿ ಬಹಳ ದೂರ ಓಡಿಸಿದ್ದರಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಭಯಗೊಂಡರು.