ಮೈಸೂರು : ಮಹಿಷಾ ದಸರಾ ವಿರೋಧಿಸಿ ಬಿಜೆಪಿಯಿಂದ ಚಲೋ ಚಾಮುಂಡಿಬೆಟ್ಟ ಜಾಥ ಹಿನ್ನೆಲೆ.ವಾರ್ಡ್ ವಾರು ಪೂರ್ವಭಾವಿ ಸಭೆಯನ್ನು ಸಂಸದ ಪ್ರತಾಪ್ ಸಿಂಹ ನಡೆಸಿದರು.
ಮೈಸೂರಿನ ತಿಲಕ್ ನಗರದ ವಾರ್ಡ್ ನಂಬರ್ 25 ರಲ್ಲಿ ಸಭೆ.ತಿಲಕ್ ನಗರದ ರಾಮಮಂದಿರದ ಮುಂಭಾಗ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ. ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಸಭೆ.
ಅ.13 ರಂದು ನಡೆಯಲಿರುವ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು.
ಮಹಿಷಾ ದಸರಾ ಎಂಬ ನಾಚಾಚಾರವನ್ನು ಎಲ್ಲರೂ ಸೇರಿ ತಡೆಯಬೇಕು.ಯಾರೋ ಮೂರು ಮತ್ತೊಂದು ಜನ ಕಿಡಿಗೇಡಿಗಳು ಮಾಡಬೇಕು ಎಂದು ಹೊರಟಿರುವ ಈ ಮಹಿಷ ದಸರವನ್ನು ತಡೆಯಲೇ ಬೇಕು.
ಅ.13 ರಂದು ಬೆಳಗ್ಗೆ 8 ಗಂಟೆಗೆ ತಾವರೆಕಟ್ಟೆ ಬಳಿ ಎಲ್ಲರು ಬನ್ನಿ ಎಲ್ಲರೂ ಬೆಟ್ಟಕ್ಕೆ ಹೋಗೋಣ.
ನಗರದ ಹಲವು ಭಾಗಗಳಿಂದ ಸಾವಿರಾರು ಜನ ನಮ್ಮ ಪರವಾಗಿ ಬರುತ್ತಾರೆ ಎಂದರು.
ಮಹಿಷಾ ಪ್ರತಿಮೆಯ ಬಳಿ ಎಲ್ಲರೂ ಕೂರೋಣ.
ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಡೆಸುವ ಅನಾಚಾರವನ್ನ ಮಟ್ಟಹಾಕೋಣ.ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನ ವಿರುದ್ಧ ಸಂಘರ್ಷವಾದರೂ ಸರಿ ತಡೆಯೋಣ
ಎಂದು ಜನರಿಗೆ ಸಂಸದ ಪ್ರತಾಪ್ ಸಿಂಹ ಕರೆ ಕೊಟ್ಟರು