ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿಯಲ್ಲಿ ಸೋಮವಾರ ತಡರಾತ್ರಿ ಮಳೆಯಾಗಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆ ಹಾಗೂ ತಮಿಳುನಾಡಿನ ತಾಳವಾಡಿ, ಹಾಸನೂರು, ದಿಂಬಂ ಕಡೆ ತಡ ರಾತ್ರಿ ಮಳೆಯಾಗಿದ್ದು, ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಜನತೆಗೆ ಕೊಂಚಮಟ್ಟಿಗೆ ತಂಪೆರೆದಂತಾಗಿದೆ.
ಪ್ರಸ್ತುತ ಚಾಮರಾಜನಗರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಮಳೆಯಾಗುವ ಸಂಭವವಿದೆ. ಸೋಮವಾರ ತಡರಾತ್ರಿ 11.15 ರಲ್ಲಿ ಭಾರಿ ಸಿಡಿಲು ಬಡಿದ ಘಟನೆ ನಡೆದಿದ್ದು, ಅನಾಹುತವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ತಮಿಳುನಾಡಿನ ತಾಳವಾಡಿ ಸಮೀಪದ ಕೊಂಗಹಳ್ಳಿ ಬೆಟ್ಟಕ್ಕೆ ಸಾಗುವ ಮಾರ್ಗದಲ್ಲಿರುವ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದ್ದು, ಅಲ್ಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ದಿಂಬಂ ಘಾಟ್ ನಲ್ಲಿ ಮಳೆಯಾಗಿದ್ದು, ಮಳೆಯ ನೀರು ಚಾನಲ್ ಮೂಲಕ ಸುರ್ವಣಾವತಿ ಹಾಗೂ ಚಿಕ್ಕಹೊಳೆ ಜಲಾಶಯದತ್ತ ಹರಿದು ಬರುತ್ತಿದೆ.