ಚಾಮರಾಜನಗರ : ತಾಲ್ಲೂಕು ಕಛೇರಿಯಲ್ಲಿರುವ ರೆಕಾರ್ಡ್ ರೂಂ ಗೆ ಕಿಡಿಗೇಡಿಗಳು ಬೀಗ ಹೊಡೆದು ಒಳ ನುಗ್ಗಿ ಕೆಲವು ದಾಖಲೆಗಳನ್ನು ಕಂಡೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಕಿರುವ ತಾಲ್ಲೂಕು ಕಛೇರಿಗೆ ಸೋಮವಾರ ರಾತ್ರಿ ಬಂದ ಕಿಡಿಗೇಡಿಗಳು ರೆಕಾರ್ಡ್ ರೂಂ ಬೀಗ ಹೊಡೆದು ಅಕ್ರಮವಾಗಿ ಒಳ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆರಳಚ್ಚು ವಿಭಾಗ ಹಾಗೂ ಶ್ವಾನ ದಳವನ್ನು ಕರೆಯಿಸಿ ಪರಿಶೀಲಿಸಿದರು.
ಹನೂರು ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಭೂ ಕಳ್ಳರು ಹೆಚ್ಚಾಗುದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಖರೀದಿ ಹಾಗೂ ಪರಭಾರೆ ಮಾಡಿರುವವರೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ.