ದೆಹಲಿ : ಭಾರತೀಯ ಚುನಾವಣಾ ಆಯೋಗವು ನಿನ್ನೆ (ಸೆ.9) ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ದಿನಾಂಕ ಪ್ರಕಟಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ, ಮಿಜೋರಾಂಗೆ ನವೆಂಬರ್ 7 ರಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನವೆಂಬರ್ 30ರಂದು ಕೊನೆಗೊಳ್ಳಲಿದೆ. ಡಿಸೆಂಬರ್ 5ರಂದು ಎಲ್ಲಾ ರಾಜ್ಯಗಳ ಮತ ಎಣಿಕೆ ನಡೆಯಲಿದೆ.
ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ತಾವು ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಸಮೀಕ್ಷೆಯ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ 48 ರಿಂದ 60 ಸ್ಥಾನಗಳನ್ನು ಗೆಲ್ಲಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ.
ಸಮೀಕ್ಷೆಯ ಅಂಕಿ-ಅಂಶಗಳು ಇಲ್ಲಿದೆ:
ರಾಜಸ್ಥಾನ :
ವಿಧಾನಸಭಾ ಕ್ಷೇತ್ರ: 200
ಮ್ಯಾಜಿಕ್ ನಂಬರ್: 101
ಬಿಜೆಪಿ: 127-137
ಕಾಂಗ್ರೆಸ್: 59-69
ಮಧ್ಯಪ್ರದೇಶ
ವಿಧಾನಸಭಾ ಕ್ಷೇತ್ರ : 230
ಬಿಜೆಪಿ: 104-116
ಕಾಂಗ್ರೆಸ್: 113-125
ಛತ್ತೀಸ್ಗಢ :
ವಿಧಾನಸಭಾ ಕ್ಷೇತ್ರ: 90
ಬಿಜೆಪಿ: 39-45
ಕಾಂಗ್ರೆಸ್: 45-51
ಇತರೆ: 0-2
ತೆಲಂಗಾಣ :
ವಿಧಾನಸಭಾ ಕ್ಷೇತ್ರ: 119
ಬಿಎಆರ್ಎಸ್: 43-55
ಬಿಜೆಪಿ: 5-11
ಕಾಂಗ್ರೆಸ್: 48-60
ಮಿಜೋರಾಂ :
ವಿಧಾನಸಭಾ ಕ್ಷೇತ್ರ: 40
ಎಂಎನ್ಎಫ್ : 13-17
ಕಾಂಗ್ರೆಸ್: 10-14
ಝೆಡ್ ಪಿಎಂ : 9-13
ಇತರೆ : 1-3
ಗಮನಾರ್ಹ ಅಂಶಗಳೆಂದರೆ, ತೆಲಂಗಾಣದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ, ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಪಕ್ಷ ಸೋಲನುಭವಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಸಮೀಕ್ಷೆ ಹೇಳಿದೆ.
ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರುವ ಪ್ರಮುಖ ರಾಜ್ಯ ರಾಜಸ್ಥಾನದಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿಸುವ ಸಾಧ್ಯತೆ ಇದ್ದು, ಕೈ ಪಡೆಗೆ ಸೋಲಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾ-ನೇರಾ ಪೈಪೋಟಿ ನಡೆಯಲಿದ್ದು, ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆ ಹೇಳಿದೆ.
ಛತ್ತೀಸ್ ಗಢ ಮತ್ತು ಮಿಜೋರಾಂನಲ್ಲೂ ಕಾಂಗ್ರೆಸ್ ಪರ ಮತದಾರರ ಒಲವು ಹೆಚ್ಚಿದೆ ಎಂದು ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸಿದೆ.