ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನಿನ್ನೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿರುವ ಶಾಸಕ ಹೆಚ್ ಡಿ ರೇವಣ್ಣ, ಯಾವುದೇ ಮೆರವಣಿಗೆ, ಸಂಭ್ರಮಾಚರಣೆ ಮಾಡದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, . ಇಂದು ನಾನು ನ್ಯಾಯಾಲಯಕ್ಕೆ ತಲೆ ಭಾಗಿದ್ದೇನೆ. ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ. ಯಾರು ಕೂಡ ಸಂಭ್ರಮಾಚರಣೆ ಮಾಡಬೇಡಿ ಯಾವುದೇ ಮೆರವಣಿಗೆ ರ್ಯಾಲಿ ಬೇಡ ಪಟಾಕಿ ಹೊಡೆಯೋದು ಭೇಡ, ಸಂಕಷ್ಟದಲ್ಲಿದ್ದಾಗ ಇದ್ಯಾವುದು ಬೇಡ ಎಂದು ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.