ಮೈಸೂರು : ಮೈಸೂರಿನಲ್ಲಿ ಕಾವೇರಿ ಹೋರಾಟ ಮುಂದುವರೆದಿದೆ. ಕಾವೇರಿ ಕ್ರಿಯಾ ಸಮಿತಿ, ಕನ್ನಪರ, ರೈತ ಸಂಘಟನೆಗಳಿಂದ ಟೌನ್‌ಹಾಲ್ ಬಳಿ ನಿತ್ಯ ಪ್ರತಿಭಟನೆ ನಡೆಯುತ್ತಿದೆ.
ಕಳೆದ ನಾಲ್ಕು ದಿನಗಳಿಂದ ನಿರಂತರ ಧರಣಿ ನಡೆಸುತ್ತಿರುವ ಕಾವೇರಿ ಕ್ರಿಯಾ ಸಮಿತಿ.ಪ್ರತಿ ದಿನ ಒಂದೊಂದು ಸಂಘಟನೆಗಳು ಭಾಗಿ.ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ.ರಾಜ್ಯ ಸರ್ಕಾರದ ಶಾಸಕರು ಮತ್ತು ಸಂಸದರ ವಿರುದ್ಧ ವಾಗ್ದಾಳಿ.ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹ.ಒಕ್ಕೂಟ ವ್ಯವಸ್ಥೆಯಲ್ಲಿ ಒಬ್ಬರಿಗೆ ಬೆಣ್ಣೆ ಇನ್ನೊಬ್ಬರಿಗೆ ಸುಣ್ಣ ಎಂಬ ಅನ್ಯಾಯವನ್ನು ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರ ಮಾಡುತ್ತಿದೆ.
ಒಕ್ಕೂಟದಿಂದ ಹೊರ ಬರಬೇಕಾಗುತ್ತದೆ.
ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹಿಸಬೇಕಾಗುತ್ತದೆ.
ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರತಿಭಟನಾಕಾರರು.