ಮೈಸೂರು : ರಾಜ್ಯ ಸರಕಾರದ ವಿರುದ್ದ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ಮಾಡಿದ್ದಾರೆ
ಶಿವಮೊಗ್ಗ ಪ್ರಕರಣ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಒಂದೊಂದು ಸರಿ ಒಳ್ಳೆಯವರು ರಾಜ್ಯ ಅಳುತ್ತಾರೆ.ಒಂದೊಂದು ಬಾರಿ ರಾಕ್ಷಸರು ರಾಜ್ಯ ಅಳುತ್ತಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ.
ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ.ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ.
ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ.ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು ಚೂರಿ ಹಿಡಿದು ಹಿಂಬಂಧಿಯಿಂದ ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ.
ಚುಕ್ಕಾಣಿ ಹಿಡಿದವರು ಮನಸ್ಥಿತಿಯಂತೆ ಉಳಿದವರು ಇರುತ್ತಾರೆ. ಸಿದ್ದರಾಮಯ್ಯ ಎಲ್ಲಾ ನೋಡಿ ಕಣ್ಮುಂಚಿ ಕುಳಿತಿದ್ದಾರೆ ಎಂದು ಹೇಳಿದರು.
ಪಿಎಫ್ ಐ, ಕೆಎಫ್ಹ್ ಡಿ ಮೇಲಿನ ಕೇಸ್ ವಾಪಾಸ್ ಪಡೆದ ಕಾರಣ ಇವತ್ತು ವಿಕೃತಿಗಳು ವಿಜೃಂಭಿಸುತ್ತಿವೆ.
ಸಿದ್ದರಾಮಯ್ಯ ಇದಕ್ಕೆ ಕಾರಣ. ಅವರು ಬಿಗಿ ಆಗಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ.ಕೆಎಫ್ಹ್ ಡಿ, ಪಿಎಫ್ ಐ ಸಂಘಟನೆಗಳು ಎದ್ದು ನಿಂತಿವೆ. ಸರಕಾರಕ್ಕೆ ಲಂಗು ಲಾಗಾಮು ಇಲ್ಲ. ಮುಸ್ಲಿಂ ಪುಂಡರು ಎಸ್ಪಿ ಮೇಲೆ ಕಲ್ಲು ತೂರುತ್ತಾರೆ. ಕೋಲಾರದಲ್ಲಿ ದಲಿತ ಸಂಸದರ ಮೇಲೆ ಎಸ್ಪಿ ಹಲ್ಲೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಕಾವೇರಿ ನೀರು ವಿಚಾರಕ್ಕೆ ಉತ್ತರಿಸಿದ ಅವರು ತಮಿಳು ನಾಡು ಸಿಎಂ ಸ್ಟ್ಯಾಲಿನ ವಿರುದ್ದ ಒಬ್ಬರಾದರೂ ಮಾತಾಡಿದ್ದಾರಾ? ಈ ಸರಕಾರಕ್ಕೆ ಬೆನ್ನು ಮೂಳೆಯೆ ಇಲ್ಲ.
ಸ್ಟ್ಯಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣಾ?
ಸಿದ್ದರಾಮಯ್ಯಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ ಸ್ಟ್ಯಾಲಿನ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ.
ಸ್ಟ್ಯಾಲಿನ್ ವಿರುದ್ದ ಮಾತಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ ಎಂದು ಲೇವಡಿ ಮಾಡಿದರು