ಮೈಸೂರು : ಚುನಾವಣೆ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದುಗಳು ನೆನಪಾಗ್ತಾರೆ ಎಂದು ಮೈಸೂರಲ್ಲಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಸರ್ಕಾರದಲ್ಲಿ ರಾಜ್ಯಾಧ್ಯಕ್ಷರ ಕಾರು ಇಳಿಸಿ ಓಡಿಸಿದ್ರು
ಬಿಜೆಪಿ ಅವಧಿಯಲ್ಲಿ ಹತ್ಯೆಗಳು ನಡೆದಿಲ್ಲವೇ?
ಲೋಕಸಭಾ ಚುನಾವಣೆಗೆ ಒಂದು ವರ್ಷವಿದೆ.
ಚುನಾವಣೆ ಬಂದಾಗಲೇ ಇವರಿಗೆ ಪಾಕಿಸ್ತಾನ, ಮುಸ್ಲಿಂ, ಗಣೇಶ, ಮಸೀದಿ, ಆಂಜನೇಯ ನೆನಪಾಗುತ್ತಾ?
ಇದೆಲ್ಲ ಚುನಾವಣಾ ಗಿಮಿಕ್ ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸ್ತಾರೆ. ಶಿವಮೊಗ್ಗ ಗಲಾಟೆ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಕ್ರಾಂತಿ ನಂತರ ಸರ್ಕಾರ ಬೀಳುತ್ತೆ ಎಂಬ ಸಿಪಿ ಯೋಗೇಶ್ವರ್ ಹೇಳಿಕೆ ವಿಚಾರ.ಬಿಜೆಪಿಯವ್ರು ಹಗಲು ಗನಸು ಕಾಣುತ್ತಿದ್ದಾರೆ.ಸರ್ಕಾರ ಸುಭದ್ರವಾಗಿದೆ ಜನರಿಗೆ ಒಳ್ಳೆಯ ಆಡಳಿತ ಕೊಡುತ್ತೇವೆ.ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ಜನ ಹೇಗೆ ಉತ್ತರ ಕೊಟ್ಟಿದ್ದಾರೆ.ಅದೇ ರೀತಿ ಲೋಕಸಭೆ ಚುನಾವಣೆಯಲ್ಲು ಉತ್ತರ ಕೊಡುತ್ತಾರೆ.ರಾಜ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ.
ಆಡಳಿತದಲ್ಲಿ ಜಾತಿವಾರು ಅಧಿಕಾರಿಗಳನ್ನ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು